ಸಾರ್ವಜನಿಕ ಸೇವೆಯಲ್ಲಿ ಸಹಾನುಭೂತಿ ತೋರಿಸಿ – ವೈದ್ಯರುಗಳಿಗೆ ಶಾಸಕರ ಕಿವಿಮಾತು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.13 :- ಹಿಂದುಳಿದ ತಾಲೂಕಿನಲ್ಲಿ ಅನಕ್ಷರಸ್ಥರು, ಬುಡಕಟ್ಟು ಸಮುದಾಯದ ಜನತೆ ಸೇರಿದಂತೆ ಅನೇಕ ಬಡಜನತೆಯೇ ಹೆಚ್ಚಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅವಲಂಬಿತಾರಾಗಿದ್ದು ಅವರ ವರ್ತನೆಯಲ್ಲಿ ನಿಮಗೆ ಮುಜುಗರವಾದರೂ ಅದನ್ನು ಪಕ್ಕಕ್ಕಿಟ್ಟು ವಿದ್ಯಾವಂತರಾದ ನೀವುಗಳು ನಿಮ್ಮ ಹತ್ತಿರ ಆರೋಗ್ಯ ತಪಾಸಣೆಗೆ ಬಂದ ರೋಗಿಗಳ ಬಳಿ ಸಹಾನುಭೂತಿ ತೋರಿಸಿ ವರ್ತಿಸಿ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಸೇವಾ ನಿರತ ವೈದ್ಯರುಗಳಿವೆ ಕಿವಿ ಮಾತು ಹೇಳಿದರು.
ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಶಾಸಕರ ನೇತೃತ್ವದಲ್ಲಿ ಅಂಗನವಾಡಿ, ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ಆಸಾಂಕ್ರಾಮಿಕ ಖಾಯಿಲೆ ಪತ್ತೆ ಹಾಗೂ ಚಿಕಿತ್ಸಾ ಶಿಬಿರದ  ಚಾಲನೆ ಕಾರ್ಯದ ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಪ ಪಂ ಸದಸ್ಯೆ ಲಕ್ಷ್ಮೀದೇವಿ ಬಸವರಾಜ ಅವರು ಕೆಲ ದಿನದ ಹಿಂದೆ ನನಗೆ ತೀವ್ರ ಎದೆನೋವು ಕಾಣಿಸಿಕೊಂಡಾಗ ಕೂಡ್ಲಿಗಿ ಆಸ್ಪತ್ರೆಗೆ ಬಂದು ತಪಾಸಣೆ ಹಾಗೂ ಚಿಕಿತ್ಸೆಗೆಂದು  ಬಂದಾಗ ಅಂದು ಕರ್ತವ್ಯ ನಿರತ  ವೈದ್ಯರೊಬ್ಬರೂ ನನಗೆ ಕಾಣಿಸಿಕೊಂಡ ಎದೆನೋವಿನ ಚಿಕಿತ್ಸೆಗೆ ಸ್ಪಂದನೆ ನೀಡದೆ ಆ ಸಲಕರಣೆ ಇಲ್ಲಾ ಈ ಸಲಕರಣೆ ಇಲ್ಲಾ ಎಂದು ಹೇಳುವ ಜೊತೆಗೆ ಯಾರಿಗಾದರೂ ಹೇಳಿ ಎಂದು ನೀವು ಇಷ್ಟೊಂದು ನಮ್ಮನ್ನ ಕೇಳುವ ಬದಲಾಗಿ ಶಾಸಕರನ್ನು ಕೇಳಿ ಎಂದು ನೇರವಾಗಿ ಹೇಳುತ್ತಿದ್ದೂ ನಾನು ಸಹ ಒಬ್ಬ ಪ ಪಂ ಸದಸ್ಯೆಯಾಗಿದ್ದೇನೆ ಇದನ್ನು ಶಾಸಕರ ಗಮನಕ್ಕೆ ತಂದು ನನ್ನಂತಹ ಎಷ್ಟೋ ಮಂದಿಗೆ ಅನುಕೂಲವಾಗಬೇಕೆಂದು ನಿಮ್ಮಗಳ ಗಮನಕ್ಕೆ ತಂದಿದ್ದೇನೆ ಎಂದು ಶಾಸಕರ ಗಮನಕ್ಕೆ ತಂದರು ಮತ್ತು ಅದೇ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಾಟೇರ್ ಹಾಲೇಶ ಮಾತನಾಡಿ ರಕ್ತ ಪರೀಕ್ಷೆಗೆ ಗರ್ಭಿಣಿ ಸ್ತ್ರೀಯರು ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ಇದ್ದು ಇನ್ನೊಂದು ರಕ್ತಪರೀಕ್ಷೆ ಘಟಕ ತೆರೆಯುವಂತೆ ಶಾಸಕರ ಗಮನಕ್ಕೆ ತಂದರು ಈ ಮನವಿ ಅರಿತ ಶಾಸಕರು ತಕ್ಷಣ ಆಸ್ಪತ್ರೆ ಆವರಣದ ಕೊಠಡಿಯೊಂದರಲ್ಲಿ ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಡಾ ಎಸ್ ಪಿ ಪ್ರದೀಪಕುಮಾರ ಹಾಗೂ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ ಮಧು ನೇತೃತ್ವದಲ್ಲಿ  ತಕ್ಷಣ ವೈದ್ಯರುಗಳ  ಸಭೆ ಸೇರಿಸಿ ಶಾಸಕರು ಮಾತನಾಡುತ್ತ ವಿದ್ಯಾವಂತ ಹಾಗೂ ಬುದ್ದಿವಂತರಾದ ನಾವುಗಳು ಜನರ ಆರೋಗ್ಯ ಸಮಸ್ಯೆಗೆ ಸ್ಪಂದನೆ ನೀಡುವ ಜೊತೆಗೆ ಅವರ ಜೊತೆ ಸಹಾನುಭೂತಿಯ ವರ್ತನೆ ಬಹು ಮುಖ್ಯ ಎಂದು ತಿಳಿಸಿದರು ಮತ್ತು ರಕ್ತ ಪರೀಕ್ಷೆ ವರದಿ ಪಡೆಯಲು ಕೆಲ ಸಮಯ ಕಾಯಬೇಕಾಗಿರುವುದರಿಂದ ಸ್ವಲ್ಪ ತಡವಾಗುತ್ತದೆ ಅಲ್ಲದೆ ಮತ್ತೊಂದು ರಕ್ತ ಪರೀಕ್ಷೆ ಘಟಕ ತೆರೆಯಲು ಸದ್ಯದಲ್ಲೇ ಅದರ ಚರ್ಚೆ ನಡೆಸಿ ಜನರ ಅನುಕೂಲಕ್ಕೆ ಸ್ಪಂದಿಸುವುದಾಗಿ ವೈದ್ಯರುಗಳು ಶಾಸಕರಿಗೆ ತಿಳಿಸಿದರು.
ಈ ವೈದ್ಯರುಗಳ ಸಭೆಯಲ್ಲಿ ಡಾ ಪ್ರದೀಪ, ಡಾ ಮಧು, ಡಾ ಅಚ್ಯುತ್, ಡಾ ನಾಗರಾಜ, ಡಾ ನಿರಂಜನ್ ಸೇರಿದಂತೆ ಇತರರು ಇದ್ದರು