ಹಬೋಹಳ್ಳಿ : ಶ್ರೀ ಕಲ್ಲೇಶ್ವರ ರಥೋತ್ಸವ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ:ಮಾ.13 ಪಟ್ಟಣದ ಹಳೆ ಊರಿನ ಶ್ರೀ ಕಲ್ಲೇಶ್ವರ 66ನೇ ವರ್ಷದ  ರಥೋತ್ಸವ  ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
 ಪ್ರತಿ ವರ್ಷದಂತೆ ಶ್ರೀ ಕಲ್ಲೇಶ್ವರ ದೇಗುಲದಲ್ಲಿ ಬೆಳಗ್ಗೆನಿಂದಲೂ ಪೂಜೆ ಅಭಿಷೇಕ ಪಂಚಾಮೃತ ರುದ್ರಭಿಷೇಕ ಸೇರಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಕ್ತರು ದೇವರಿಗೆ ಹೂವು ಹಣ್ಣು ಕಾಯಿ, ಸಮರ್ಪಿಸಿದರು.
 ಸಾಯಂಕಾಲ ರಥೋತ್ಸವದ ಮುನ್ನ ನಡೆದ ಪತಾಕಿ  ಹರಾಜಿನಲ್ಲಿ ಸ್ಥಳಿಯ ನಿವಾಸಿ ಜಾಲಿ ಕೊಟ್ರಮ್ಮ ಅವರು . 1,01,001 ರೂ  ಗೆ ಪಡೆದರು . ನಂತರ ತೇರು ಮುಂದೆ ಸಾಗುತ್ತಿದ್ದಂತೆ ಭಕ್ತಾದಿಗಳು ಬಾಳೆಹಣ್ಣು ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು ಸ್ವಾಮಿಗೆ ಜೈಕಾರ ಹಾಕುತ್ತಾ  ಯುವಕರು ಮತ್ತು ಮಕ್ಕಳು ಸಂಭ್ರಮದಿಂದ ತೇರು ಎಳೆದು ಸಂಭ್ರಮಿಸಿದರು.
One attachment • Scanned by Gmail