ಮಹಿಳೆಯರಿಂದ ದೇಶದ ಪ್ರಗತಿ: ಸುರೇಖಾ
ಬೀದರ : ಮಾ.13: ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ
ಮಹಾವಿದ್ಯಾಲಯದಲ್ಲಿ ಶ್ರೀಮತಿ ಸುರೇಖಾ ಆಹಾರ ಇಲಾಖೆ ಉಪ ನಿರ್ದೇಶಕರು, ಬೀದರ ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರ ಅಮೃತ ಹಸ್ತದಿಂದ ಸರಸ್ವತಿ ಮಾತೆಯ ಪೂಜೆ ಸಲ್ಲಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಸುರೇಖಾರವರು ಮಾತನಾಡುತ್ತಾ ವೇದಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿ, ಅಪಲಾ, ಇವರು ಬೆರಣಳಿಕೆ ಯಷ್ಟು ಮಾತ್ರ ವಿದ್ವಾಂಸರಿದ್ದರು ಆಗೀನ ಕಾಲದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ಇರಲಿಲ್ಲ ಆದರೆ, ಇಂದು ಎಲ್ಲಾ ಸ್ತ್ರೀಯರಿಗೆ ಶಿಕ್ಷಣದ ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಲು ಅವಕಾಶ ಮಾಡಿಕೊಟ್ಟಿದೆ ಇದರ ಸದುಪಯೋಗವನ್ನು ಇಂದಿನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಂಶುಪಾಲರಾದ ಡಾ. ವಿನೀತಾ ಪಾಟೀಲ, ಲಿಂಗರಾಜ ಅಪ್ಪಾ ತಾಂತ್ರಿಕ ಮಹಾವಿದ್ಯಾಲಯ ಬೀದರ ಇವರು ಮಾತನಾಡುತ್ತಾ ಪ್ರಾಚೀನ ವಿದ್ವಾಂಸರಾದ ಮನುಸ್ಮøತಿ ಹೇಳಿದಂತೆ ಸ್ತ್ರೀಯರಿಗೆ ಸ್ವಾತಂತ್ರ್ಯ ಇಲ್ಲ ಎಂದ ಹೇಳದ ಅವರು ಅಂದಿನ ಕಾಲದಲ್ಲಿ ದೊಡ್ಡವರೇನಿಸಿಕೊಂಡರು ಆದರೆ, ಇಂದು ಕಾಲಕ್ಕೆ ತಕ್ಕಂತೆ ತದ್ವಿರುದ್ದವಾಗಿ ಇವತ್ತಿನ ಆಧುನಿಕ ಕಾಲದ ಮಹಿಳೆಯರು ಇವರ ಕೃತಿಯನ್ನು ಸುಟ್ಟಿ ಹಾಕಿ ಎಲ್ಲಾ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿ ಶಿಕ್ಷಕಿಯಿಂದ ಹಿಡಿದು ವಿಮಾನ ಚಾಲನೆ ಮಾಡುವರೆಗೆ ಮಹಿಳೆಯರು ಮುಂದುವರೆದಿದ್ದಾರೆ ಅದಕ್ಕಾಗಿ ಶಿಕ್ಷಣವೇ ಮಹಿಳೆಯರಿಗೆ ಒಂದು ಬ್ರಹ್ಮಾಸ್ತ್ರಯಿದ್ದ ಹಾಗೆ ಆದ್ದರಿಂದ ಶಿಕ್ಷಣವೇ ಶಕ್ತಿಯೆಂದು ಅರಿತು ವಿದ್ಯಾರ್ಥಿನಿಯರು ಉನ್ನತ ಹುದ್ದೆ ಪಡೆಯಲು ಸದಾ ದಾಪುಗಾಲು ಇಡಬೇಕೆಂದು ನುಡಿದರು.
ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ಒಂದು ಹೆಣ್ಣು ಕಲಿತರೆ ಒಂದು ಕುಟುಂಬ ಶಿಕ್ಷಿತವಾದಂತೆ ‘ಕಲಿತ ನಾರಿ ದೇಶಕ್ಕೆ ದಾರಿ’, ಶಿಕ್ಷಣವೇ ಶಕ್ತಿ ಒಬ್ಬ ಪುರುಷನ ಹಿಂದೆ ಮಹಿಳೆ ಅಭಯಹಸ್ತಯಿದ್ದಾಗ ಮಾತ್ರ ಮುಂದುವರೆಯಲು ಸಾದ್ಯವೆಂದು ನುಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ನಮ್ಮ ಭಾರತದ ಘನ ಸಂವಿಧಾನ ಸ್ತ್ರೀಯರಿಗೆ 33% ಮೀಸಲಾತಿ ನೀಡಿ ರಾಜಕೀಯವಾಗಿ ಹಾಗೂ ಸಮಾಜಿಕವಾಗಿ ಮುಂದೆಬರಲು ಅವಕಾಶ ಮಾಡಿಕೊಟ್ಟಿದೆ ಪ್ರಾಚೀನ ಕಾಲದ ಸ್ತ್ರೀಯವರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತರಾಗಿದ್ದರು ಆದರೆ ಇಂದು ತೋಟ್ಟಿಲು ತೂಗುವ ಕೈ ಯುದ್ಧ ವಿಮಾನ ಚಾಲನೆ ಮಾಡುವವರೆಗೂ ಸಮರ್ಥರಾಗಿದ್ದಾರೆ ಉದಾಹರಣೆ ವಿಜ್ಞಾನಿಯಾದ ದಿ. ಕಲ್ಪನಾ ಚಾವ್ಲಾ, ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ, ಸರೋಜನಿ ನಾಯ್ಡು, ಕಿತ್ತೂರ ರಾಣಿ ಚೆನ್ನಮ್ಮ, ಅಹಲ್ಯಬಾಯಿ ಹೋಳ್ಕರ, ಸಾರಾ ಹಮೀದ್ ಅಹ್ಮದ್ ಪ್ರಸ್ತುತ ವಿಮಾನ ಚಾಲಕರಾಗಿ ಹಾಗೂ ಯುದ್ಧ ವಿಮಾನ ನಡೆಸುವ ಮೇಘನಾ ಶಾನುಭೋಗ, ಪ್ರಥಮ ಮಹಿಳಾ ಶಿಕ್ಷಕಿಯಾದ ಶ್ರೀಮತಿ ಸಾವಿತ್ರಿಬಾಯಿ ಫೂಲೆ ಇವರೆಲ್ಲರು ಇಂದಿನ ವಿದ್ಯಾರ್ಥಿನಿರಿಗೆ ಉನ್ನತ ಸ್ಥಾನ ಪಡೆಯಲು ದಾರಿದೀಪವಾಗಿದ್ದಾರೆ ಇವರ ಆದರ್ಶವನ್ನು ಇಟ್ಟುಕೊಂಡು ಮಹಾವಿದ್ಯಾಲಯ ಹಾಗೂ ಗ್ರಾಮದ ಕೀರ್ತಿ ಅಲ್ಲದೇ ನಿಮ್ಮ ಪಾಲಕರ ಕೀರ್ತಿಯನ್ನು ಉನ್ನತ ಫಲಿತಾಂಶ ಪಡೆಯುವದರ ಮುಖಾಂತರ ಹೆಚ್ಚಿಸಬೇಕೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ದೀಪಾ ರಾಗ, ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆಯ ಅಂಗವಾಗಿ ಉಪನ್ಯಾಸಕೀಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಪ್ರಶಸ್ತ್ತಿ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಗೀತೆಯನ್ನು ಪ್ರಾಧ್ಯಾಪಕರಾದ ಶ್ರೀಮತಿ ಶೈಲಜಾ, ಶ್ರೀಮತಿ ವಾಣಿಶ್ರೀ ಹಾಗೂ ಶ್ರೀಮತಿ ಪ್ರೀಯಾದರ್ಶಿನಿ ಹಾಡಿದರೆ, ಸ್ವಾಗತವನ್ನು ಮಹಿಳಾ ಸಬಲೀಕರಣದ ಅಧಿಕಾರಿಗಳಾದ ಶ್ರೀಮತಿ ಸುಜಾತಾ ಹಿಪ್ಪರಗಿ ನಡೆಸಿಕೊಟ್ಟರೆ, ವಂದನಾರ್ಪಣೆಯನ್ನು ಶ್ರೀಮತಿ ಗೋದಾವರಿ ಬಿರಾದಾರ ನುಡಿದರು ಕಾರ್ಯಕ್ರಮವನ್ನು ಆಂಗ್ಲ ವಿಭಾದ ಪ್ರಾಧ್ಯಾಪಕರಾದ ಡಾ. ಸುಮನ್ ಕೌರ್ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯರ್ಥಿನಿಯರು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.