ಆರ್.ಬಿ.ವೈ.ಎಂ ಕಾಲೇಜ್ ನಲ್ಲಿಮಹಿಳಾ ದಿನಾಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.13: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 12.03.2024 ರಂದು ಮಹಿಳಾ ಶಿಕ್ಷಕರು ವಿದ್ಯಾರ್ಥಿನಿ ವೃಂದದವರ ಸಮ್ಮುಖದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಪ್ರಣಿತ ಅಜಯ್ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೆಣ್ಣು ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ತಿಳುವಳಿಕೆ ನೀಡಿದರು. ಹಾಗೂ ಹೆಣ್ಣು ಮಕ್ಕಳು ಅವಶ್ಯಕವಾಗಿ ಪಡೆಯಬೇಕಾದ ಲಸಿಕೆಗಳ ಬಗ್ಗೆ ಮಾಹಿತಿ ನೀಡಿದರು.  ಪ್ರಾಂಶುಪಾಲರಾದ ಡಾ.ಟಿ ಹನುಮಂತ್ ರೆಡ್ಡಿಯವರು ಮಹಿಳೆಯರಿಗೆ ಇರುವ ಕಾನೂನುಗಳು ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಸಾಯಿ ಮಾಧವಿ ಅವರು ಮಹಿಳೆ ಎಂದು ಪ್ರತಿಯೊಂದು ರಂಗದಲ್ಲೂ ಪುರುಷನಿಗೆ ಸಮನಾಗಿ ದುಡಿಯುತ್ತಿದ್ದಾಳೆ ಮಹಿಳೆ ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎಂದು ಹೇಳಿದರು.
ಈ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಉನ್ನತ ಡಾಕ್ಟರೇಟ್ ಪದವಿ ಪಡೆದಿರುವುದಲ್ಲದೆ ವಿಶೇಷ ಸಾಧನೆಗಳನ್ನು ಮಾಡಿರುವ ಮತ್ತು ಪುಸ್ತಕ ಬಿಡುಗಡೆ ಮಾಡಿರುವ ಮಹಿಳೆಯರಾದ ಡಾ. ಪ್ರಭಾವತಿ, ಡಾ. ಚಿನ್ನ ವಿ ಗೌಡರ್ , ಡಾ. ಬಾಗ್ಯ, ಸರ್ವರ್ ಬೇಗಂ, ವಿನೂತ ಪ್ರಶಾಂತ್, ಡಾ. ಮಾನಸ ಅವರನ್ನು ಮಹಾವಿದ್ಯಾಲಯದ ಆರ್ ವೈ ಎಂ ಇ ಸಿ ಮಹಿಳೆಯರ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿನಿ ವೃಂದದವರು ಮಹಾವಿದ್ಯಾಲಯದ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು. ಪ್ರೊಫೆಸರ್ ಡಾ. ಶೋಭಾ ಸ್ವಾಗತಿಸಿದರು, ಶ್ರೀಮತಿ ಸರಸ್ವತಿ ವಂದಿಸಿದರು ಹಾಗೂ ಶ್ರೀಮತಿ ಉಮಾದೇವಿ ನಿರೂಪಿಸಿದರು. ಡೀನ್-ಅಕಾಡಮಿಕ್ ಡಾ|| ಹೆಚ್.ಗಿರೀಶ, ಆರ್‍ವೈಎಂಈಸಿ-ಮಹಿಳಾ ಕೋಶದ ಸಂಯೋಜಕರು ಡಾ|| ಶೋಭಾ ಎಂ.ಎಸ್,  ಡಾ|| ಪ್ರಭಾವತಿ, ಶ್ರೀಮತಿ ಅನಸೂಯ ಪಾಟಿಲ್, ಡಾ|| ಡಾ. ಚಿನ್ನ ವಿ ಗೌಡರ್,  ಡಾ|| ಸಾಯಿ ಮಾಧವಿ, ಡಾ|| ಸುಮಂಗಳ.ಬಿ, ಶ್ರೀಮತಿ ಅಪರ್ಣ ವಸ್ರ್ಥದ, ಶ್ರೀಮತಿ ಗಂಗಮ್ಮ ಮಹೇಶ ಸಜ್ಜನ್, ಶ್ರೀಮತಿ ಸೌಮ್ಯ, ಶ್ರೀಮತಿ ರಾಖಿ ಪಾಟೀಲ್  ಇನ್ನಿತರೇ ಗಣ್ಯರು ಉಪಸ್ಥಿತರಿದ್ದರು ಎಂದು ಕಾಲೇಜ್ ನ ಪ್ರಾಂಶುಪಾಲರಾದ ಟಿ.ಹನುಮಂತರೆಡ್ಡಿ ತಿಳಿಸಿದ್ದಾರೆ.