ಆನೆಗುಂದಿ ಉತ್ಸವದಲ್ಲಿ ಜಡೇಶ ತಂಡದಿಂದ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.13: ಎರಡನೇ ದಿನವಾದ ನಿನ್ನೆ ಆನೆಗೊಂದಿ ಉತ್ಸವದ ಶಬರಿ ವೇದಿಕೆಯಲ್ಲಿ ಬಳ್ಳಾರಿಯ ಹೆಸರಾಂತ ಜಾನಪದ ಕಲಾವಿದರಾದ ಜಡೇಶ್ ಎಮ್ಮಿಗನೂರು  ಮತ್ತು ತಂಡದವರಿಂದ ಜಾನಪದ ಗೀತೆಗಳ ಕಾರ್ಯಕ್ರಮ ನೆರೆದಿದ್ದವರನ್ನು ಮಂತ್ರ ಮುಗ್ದಗೊಳಿಸಿತು,  ಪ್ರಾರಂಭದಲ್ಲಿ ಗದುಗಿನ ಪುಟ್ಟರಾಜ ಕವಿ ಗವಾಯಿಗಳವರ ಗೀತೆಯೊಂದಿಗೆ ತಮ್ಮ ಗಾಯನವನ್ನು ಪ್ರಾರಂಭಿಸಿದ ಈ ತಂಡ ನೆರೆದಿದ್ದವರ ಮನವನ್ನು ತಣಿಸಿತು ಶಬರಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ಕಲ್ಲಯ್ಯಜ್ಜನವರು ಪುಟ್ಟರಾಜ ಕವಿ ಗವಾಯಿಗಳವರ ಗೀತೆಯನ್ನು ತಮಟೆಯಲ್ಲಿ ಕೂಡ ಹಾಡಬಹುದು ಎಂದು ಈ ಕಲಾವಿದರು ತೋರಿಸಿಕೊಟ್ಟರು ಎಂದು ಗುಣಗಾನ ಮಾಡುತ್ತಾ ಆಶೀರ್ವದಿಸಿದರು ನಂತರದಲ್ಲಿ “ಒಕ್ಕಲಿಗಾಗ ಚಕ್ಕಡಿ ಬೇಕಾ” ಎನ್ನುವ ಗಿಗಿ ಪದಕ್ಕೆ ಜನರು ಸಿಳ್ಳೆ ಚಪ್ಪಾಳೆ ಮುಖಾಂತರ ಕಲಾವಿದರನ್ನು ಹುರಿದುಂಬಿಸಿದರು, ಕಾರ್ಯಕ್ರಮದಲ್ಲಿ ಗಾಯಕರಾದ.  ಡಿಜಿ ತಿರುಮಲ .ಶ್ರೀಧರ್ ರಾಥೋಡ್,ಸುಂಕಪ್ಪ,ಜೆ.ಎಸ್.ಅಶ್ವಥ್, ಕು.ಸುಮಿತ್ರ, ಎ.ಡಿ..ವೀರೇಶ್ ಹಾಗೂ ತಮಟೆ ವಾದನದಲ್ಲಿ ಮಹಾಂತೇಶ್ ನೆಲ್ಕುದುರಿ,ಮೌನೇಶ್ ಕಲಾವಿದರು ಭಾಗವಹಿಸಿದ್ದರು ನಂತರದಲ್ಲಿ ಜಿಲ್ಲಾಡಳಿತ ಕೊಪ್ಪಳದ ವತಿಯಿಂದ ಜಡೇಶ್ ಎಮ್ಮಿಗನೂರು  ತಂಡವನ್ನು ಸ್ಮರಣಿಕೆ ಮತ್ತು ಪ್ರಮಾಣ ಪತ್ರಗಳು ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು.