ಕೊಳಗಲ್ಲು ಗ್ರಾಮಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಿಸಲು ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.13: ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆ ಸೇರಿದದಂತೆ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಶೌಚಾಲಯಗಳು ಇಲ್ಲದಿರುವುದು
ಗ್ರಾಮದಲ್ಲಿನ ಸುಮಾರು 250ಕ್ಕೂ ಹೆಚ್ಚು  ಬಡ ಕುಟುಂಬಗಳು ನಿವೇಶನ ಮತ್ತು ವಸತಿ ಇಲ್ಲದೆ ಲಭ್ಯವಿರುವ ಚಿಕ್ಕಗುಡೀಸಲಲ್ಲಿ ಮೂರು ನಾಲ್ಕು ಕುಟುಂಬಗಳು ಒತ್ತಡದ.ಸಂಕಷ್ಟದಲ್ಲಿ ವಾಸಿಸುತ್ತಿದ್ದಾರೆ.
 ಗ್ರಾಮದ ವಾರ್ಡ್ ಗಳಲ್ಲಿ ಸಿಸಿ ರಸ್ತೆ , ಚರಂಡಿ ವ್ಯವಸ್ಥೆ ಇಲ್ಲದಿರುವುದಿಲ್ಲ. ಸಾರ್ಜನಿಕ ಶೌಚಾಲಯಗಳಿಲ್ಲ.
ಗ್ರಾಮದಲ್ಲಿ ಸಾಕಷ್ಟು ವಿದ್ಯವಂತ ಯವಕರಿದ್ದು ನಿತ್ಯದ ವರ್ತಮಾನ ತಿಳಿಯಲು ಗ್ರಂಥಾಲಯ ಇದ್ದು ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಕೊಳಗಲ್ಲು ಗ್ರಾಮಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಡಿ.ವೈ.ಎಫ್.ಐ ಜಿಲ್ಲಾ ಸಮಿತಿ ಆಗ್ರಹಿಸಿದೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಯ ಜಿಲ್ಲಾಧ್ಯಕ್ಷ ಯು.ಎಱ್ರಿಸ್ವಾಮಿ  ಗ್ರಾಮದ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಥಳೀಯ ಶಾಸಕರ ಮತ್ತು ಈ ಭಾಗದ ಸಂಸದರ ಗಮನಕ್ಕೆ ತರಲಾಗಿದೆ. ಆದರೆ ಅವರಾರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಚುನಾವಣೆ ಸಂದರ್ಭದಲ್ಲಿ ಜನರ ಬಳಿ ವೋಟು ಕೇಳಲು ಬರುವ ರಾಜಕೀಯ ನಾಯಕರು. ಗೆದ್ದು  ಸಂಸದ, ಶಾಸಕರಾದ ಮೇಲೆ ಗ್ರಾಮಗಳ ಕಡೆಗೆ ತಿರುಗಿ ನೋಡುವ ಕನಿಷ್ಟ ಪ್ರಯತ್ನ ಮಾಡದಿರುವುದು ಹಾಗೂ ಜನರ ಕುಂದುಕೊರತೆ  ಆಲಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. 
ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡಲು ಸಾಕಷ್ಟು ಭೂಮಿ. ಲಭ್ಯವಿದ್ದು ಸರ್ವೆ ನಂಬರ್ 557 ರಲ್ಲಿ ಸುಮಾರು 296ಕ್ಕೂ ಹೆಚ್ಚು  ಜಮೀನು ಇದೆ ಈ ಭೂಮಿ ಕುಡಿಯುವ ನೀರಿನ ಕೆರೆ ನಿರ್ಮಿಸಲು ಕಾಯ್ದಿರಿಸಲಾಗಿದ್ದು ಹಲವು ವರ್ಷಗಳಿಂದ ಕುಡಿಯುವ ನೀರಿನ ಕೆರೆ ನಿರ್ಮಿಸುವ ಚರ್ಚೆಗಳು ನಡೆದಿವೆ.  ಮಣ್ಣು ಪರೀಕ್ಷೆ ನೆಡಿದಿದೆ. ವರದಿಯೂ ಬಂದಿದೆ. ಕೆರೆಗೆ ಕಾಯ್ದಿರಿಸಿದ ಭುಮಿಯ ಪಕ್ಕದಲ್ಲೆ ತುಂಗಬಧ್ರಾ ಜಲಾಶಯದ ಎಚ್ ಎಲ್ ಸಿ ಮೇನ್ ಕಾಲುವೆ  ಇದೆ.
 ಇಷ್ಟಿದ್ದರೂ ಕೂಡ ಅಧಿಕಾರಿಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳು ಕೇವಲ ಹೆಸರಿಗಷ್ಟೇ ಅಲ್ಪಸ್ವಲ್ಪ  ಕೆರೆ ನಿರ್ಮಾಣ ಮಾಡಿ ಕೈತೊಳೆದು ಕೊಂಡಿರುವುದು ಜನರ ತಾಳ್ಮೆಯನ್ನು ಪರೀಕ್ಷಿಸುವಂತಾಗಿದೆ.
ಅರೆಬರೆ ಕಾಮಗಾರಿಯಿಂದಾಗಿ ಸುಗುವ ಅರೆಬರೆ ನೀರನ್ನೂ   ಗ್ರಾಮ ಪಂಚಾಯತ್ ಆಡಳಿತ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿದಿನಗಳು ಸಂಪೂರ್ಣ ವಿಫಲರಾಗಿದ್ದರೆ.
ಸ್ವಚ್ಛತೆ ಇಲ್ಲದೆ ಇರುವ ನೀರನ್ನು 15 ದಿನಕ್ಕೊಮ್ಮೆ 20 ದಿನಕ್ಕೊಮ್ಮೆ ಕೇಲ ವಾರ್ಡ್ ಗಳಿಗಳಿಗೆ ಸರಬರಾಜು ಮಾಡುತ್ತಾರೆ. ಇದರ ಸೇವನೆಯಿಂದ  ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದು ಬಿಟ್ಟರೆ  ಇಲ್ಲಿನ ಜನರಿಗೆ ಬೇರೆ ದಾರಿ ಇಲ್ಲ. ಅರೆಬರೆ ಕಾಮಗಾರಿಯಿಂದ ಸರಬರಾಜುಗೊಳ್ಳುವ  ಕೆರೆಯ ನೀರು 1 ವಾರ್ಡ್ ಗೇ ಸಾಲುತ್ತಿಲ್ಲ.  ಮುಂದೆ ಕಡು ಬೇಸಿಗೆ ಕಾಲ ಎದುರಾದರೆ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಗ್ರಾಮದಲ್ಲಿ ಲಭ್ಯವಿರುವ ಬೋರು ವೆಲ್ ನೀರು ಬತ್ತುವಂತಾಗಿವೆ. 
 ಆದ್ದರಿಂದ ಜಿಲ್ಲಾ ಉಸ್ತವಾರಿ ಸಚಿವರು ಜಿಲ್ಲಾಧಿಕಾರಿಗಳು ಕುಡಿಯುವ ನೀರಿನ ಅಭಾವ ನೀಗಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈ ಕೂಡಲೇ  ಸಂಬಂಧಪಟ್ಟ ಅಧಿಕಾರಿಗಳ  ಜೊತೆ ಚರ್ಚಿಸಿ ಸೂಕ್ತವಾದ ಕ್ರಮವಹಿಸ ಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಬಳ್ಳಾರಿ ಜಿಲ್ಲಾ ಸಮಿತಿ ಕಳಕಳಿಯ  ಮನವಿ ಮಾಡಿಕೊಳ್ಳುತ್ತದೆ ಎಂದಿದ್ದಾರೆ.