ಮಾಳಗೆಯವರ ಮಾತೃಹೃದಯ ಶಿಕ್ಷಕ ಸಮೂಹಕ್ಕೆ ಮಾದರಿ: ಡಾ.ಚೆಲುವಾ
ಬೀದರ್:ಸೆ.17: ನಿವೃತ್ತ ಪ್ರಾಚಾರ್ಯರಾದ ಬಾಬುರಾವ ಮಾಳಗೆ ಅವರ ಮಾತೃಹೃದಯಿ ಸ್ವಭಾವ ಇಡೀ ಶಿಕ್ಷಕ ಸಮೂಹಕ್ಕೆ ಮಾದರಿಯಾಗಿದೆ ಎಂದು ಜ್ಞಾನ ಉದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಕಾಶಿನಾಥ ಚೆಲುವಾ ತಿಳಿಸಿದರು.
ಭಾನುವಾರ ಭಾಲ್ಕಿ ತಾಲೂಕಿನ ನಿಟ್ಟೂರ್ ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜ್ಞಾನ ಉದಯ ಶಿಕ್ಷಣ ಸಂಸ್ಥೆ ಅಡಿ ನಡೆಯುತ್ತಿರುವ ಮಹಾತ್ಮ ಜ್ಯೋತಿಬಾ ಪುಲೆ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಾಬುರಾವ ಮಾಳಗೆ ಅವರ ಬಿಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜ್ಞಾನ ಉದಯ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮಾಡಿದಾಗಿನಿಂದಲೂ ಬಾಬುರಾವ ಮಾಳಿಗೆ ಅವರು ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸೇವೆಗೆ ಸೇರುವ ಸಂದರ್ಭದಲ್ಲಿ ಅವರಿಗೆ ಯಾವುದೇ ಡೊನೇಷನ್ ಲಪಡೆಯಲಿಲ್ಲ. ಅಂತಹ ಸಂದರ್ಭದಲ್ಲಿ ಅವರಿಗೆ ಹಣ ಕೊಡುವ ಸಾಮಥ್ರ್ಯವು ಸಹ ಇರಲಿಲ್ಲ. ಉಚಿತವಾಗಿ ಅವರನ್ನು ಸೇವೆಗೆ ಸೇರಿಸಲಾಗಿತ್ತು. ಮೊದಲನೇದಾಗಿ ಸಮಾಜ ವಿಜ್ಞಾನದ ಉಪನ್ಯಾಸಕರಾಗಿ ಅವರನ್ನು ಸೇವೆಗೆ ನಿಯುಕ್ತಿ ಗೊಳಿಸಲಾಯಿತು. ತದನಂತರ ಅವರ ಸೇವಾನಿಷ್ಠೆ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಮನಗಂಡು ಅವರಿಗೆ ಪ್ರಾಚಾರ್ಯರ ಜವಾಬ್ದಾರಿ ಒಪ್ಪಿಸಲಾಯಿತು. ಕಳೆದ ಎರಡು ದಶಕಕ್ಕೂ ಅಧಿಕ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಗ್ರಾಮೀಣ ಭಾಗದ ಮಕ್ಕಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ ಮಾಳಿಗೆಯವರ ಕರ್ತವ್ಯ ಮೆಚ್ಚುವಂತದ್ದು ಎಂದು ಕೊಂಡಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಾಳಗೆ ಅವರು ತಮ್ಮ ಕರ್ತವ್ಯದುದ್ದಕ್ಕೂ ಸದಾ ಹಸನ್ಮುಖಿಯಾಗಿರುತ್ತಿದ್ದರು. ಅವರ ಮಾತ್ರ ವಾತ್ಸಲ್ಯದಿಂದಲೇ ಗ್ರಾಮೀಣ ಭಾಗದ ಮಕ್ಕಳು ತಪ್ಪದೇ ಕಾಲೇಜಿಗೆ ಹಾಜರಾಗಲು ಸಾಧ್ಯವಾಗಿತ್ತು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪೆÇ್ರೀತ್ಸಾಹ ಕೊಡುವ ಮೂಲಕ ಅವರು ಕಾಲೇಜಿನಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಲು ಸಾಧ್ಯವಾಗಿದೆ ಎಂದು ಬಣ್ಣಿಸಿದರು.
ಸ್ಥಳೀಯ ಮುಖಂಡರಾದ ಪಾಂಡುರಂಗ ಕಣಜೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಾಬುರಾವ ಮಾಳಗೆ ಅವರು ಮನೆಗೆ ಒಳ್ಳೆಯ ಯಜಮಾನರಾಗಿ, ಕಾಲೇಜಿಗೆ ಉತ್ತಮ ಗುರುವಾಗಿ, ಊರಿಗೆ ಸಜ್ಜನ ಸಮಾಜ ಜೀವಿಯಾಗಿ ಗುರ್ತಿಸಿಕೊಂಡಿದ್ದಾರೆ. ತಮ್ಮ ಇಡೀ ಮೂರು ದಶಕದ ಉಪನ್ಯಾಸಕ-ಪ್ತಾಚಾರ್ಯ ಸೇವೆಯಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ, ಉಪನ್ಯಾಸಕರ ಮನ ಗೆದ್ದು, ಕಾಲೇಜು ಅಡಳಿತ ಮಂಡಳಿಯ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಿ ನಿಷ್ಠಾವಂತ ಪ್ರಾಚಾರ್ಯರೇನಿಸಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಶಾಮರಾವ ಬಂಬುಳಗಿ ಮಾತನಾಡಿ, ಬಾಬುರಾವ ಮಾಳಗೆ ಅಪ್ಪಟ ಡಾ.ಬಾಬಾ ಸಾಹೇಬರ ಅನುಯಾಯಿ. ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಚಾಚೂ ತಪ್ಪದೇ ಪಾಲನೆ ಮಾಡಿ, ಶಿಸ್ತಿನ ಶಿಪಾಯಿಯಾಗಿ ಹೊರ ಹೊಮ್ಮಿದ್ದಾರೆ. ಅವರ ಸೇವಾ ಮನೋಭಾವ ಇತರೆ ಉಪನ್ಯಾಸಕರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯರಾದ ಬಾಬುರಾವ್ ಬಾಳಗೆ ಅವರು, ಮನೆಯಲ್ಲಿ ಪತ್ನಿ-ಮಕ್ಕಳು, ಕಾಲೇಜಿನಲ್ಲಿ ಉಪನ್ಯಾಸಕರು, ಆಡಳಿತ ಮಂಡಳಿ, ಸಮಾಜದಲ್ಲಿ ಎಲ್ಲ ಮುಖಂಡರ ಸಹಕಾರದೊಂದಿಗೆ ನನ್ನ ಸೇವೆ ಸಾರ್ಥಕ ಮಾಡಿಕೊಳ್ಳಲು ಸಾಧ್ಯವಾಯಿತು. ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಮಾಡಲು ಪೆÇ್ರೀತ್ಸಾಹಿಸಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಕಾಶಿನಾಥ ಚೆಲವಾ ಹಾಗೂ ಅವರ ಕುಟುಂಬಸ್ಥರಿಗೆ ನಾನು ಸದಾ ಕೃತಜ್ಞನಾಗಿರುವುದಾಗಿ ತಿಳಿಸಿದರು.
ಸ್ಥಳೀಯ ಎ.ಎಸ್ ಐ ಬಾಪುರಾವ ಬಿರಾದಾರ, ರಮೇಶ ಬೆಲ್ದಾರ್, ಡಾ.ಸಿರಾಜೋದ್ದಿನ್, ನಾರಾಯಣರಾವ ನೇಳಗೆ, ಜ್ಞಾನೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗನಾಥ ಚೆಲವಾ, ಉಪಾಧ್ಯಕ್ಷರಾದ ಧ್ಯಾನಚಂದ ಚೆಲವಾ, ಮಹಾತ್ಮ ಜ್ಯೋತಿಬಾ ಫುಲೆ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಉಮಾಕಾಂತ ಶರ್ಮಾ, ಉಪನ್ಯಾಸಕ ನಾಗನಾಥ ಬಿರಾದಾರ. ಬಸವಂತ ಫುಲೆಕರ್, ವಿಜಯಕುಮಾರ ಚಟ್ನಾಳ್, ರಾಜೇಂದ್ರ, ಮನೋಹರ ಮಾನಕಾರಿ, ಮನೋಜ ಲಾಡೆ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಬಿಳ್ಕೊಡುಗೆ ಸಮಾರಂಭದ ಕೇಂದ್ರಬಿಂದುಗಳಾಗಿದ್ದ ಮಂಗಲಾ ಹಾಗೂ ಬಾಬುರಾವ ಮಾಳಗೆ ದಂಪತಿಗಳನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ಡಾ ಶಿರಾಜ್ಯೋದ್ದಿನ್, ಜರ್ಗಾರ ಪ್ರಾರ್ಥಿಸಿದರು. ನಿವೃತ್ತ ಪ್ರಾಚಾರ್ಯರಾದ ಬಾಬುರಾವ ಬಾಳಗೆ ಸ್ವಾಗತಿಸಿ, ವಂದಿಸಿದರು. ಪ್ರವೀಣ ಕಾರ್ಯಕ್ರಮ ನಿರೂಪಿಸಿದರು.