ದೇಶ ಕಟ್ಟುವ ಹಾಗೂ ದೇಶದ ಕೀರ್ತಿ ಹೆಚ್ಚಿಸುವ ಕೆಲಸವಾಗಬೇಕು:ರಾಘವೇಂದ್ರ ಔರಾದಕರ್
ಬೀದರ್:ಸೆ.17: ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ 164 ಜನ್ಮದಿನದ ಅಂಗವಾಗಿ ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್‍ನಲ್ಲಿ ಇಂಜಿನಿರ್ಸ್ ದಿನಾಚರಣೆಯನ್ನು ನಗರದ ಡಾ. ಚೆನ್ನಬಸವ ಪಟ್ಟದೇವರ ರಂಗಮಂದಿರಲ್ಲಿ ಬೀದರನ್ ಅಸೋಷಿಯೆಶನ್ ಆಫ್ ಕನ್ಸಲಟಿಂಗ್ ಸಿವಿಲ್ ಇಂಜಿನಿರ್ಸ್ ಅಧ್ಯಕ್ಷರಾದ ಅಶೋಕಕುಮಾರ ಉಪ್ಪೆ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಭಾರತ) ಅಧ್ಯಕ್ಷರಾದ ವೀರಶೆಟ್ಟಿ ಮಣಗೆ ಅವರ ಸಹಯೋಗದಲ್ಲಿ ಆಚರಿಸಲಾಯಿತು.
ಕಾÀರ್ಯಕ್ರಮದ ಉದ್ಘಾಟನೆಯನ್ನು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೇಳಗಿಸುವ ಮೂಲಕ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಆಡಳಿದ ಸದಸ್ಯ, ಕರ್ನಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಸದಸ್ಯರಾದ ರಾಘವೇಂದ್ರ ಔರಾದಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಣೆ ಮಾಡಿದ್ದರು.
ಕಾÀರ್ಯಕ್ರಮವನ್ನು ಉದ್ದೇಶಿಸಿ ಮತನಾಡಿದ ಅವರು ಇಂಜಿನೀಯರಗಳ ಸೇವೆ ಅಮೋಘವಾಗಿದೆ ಅವರ ಸೇವೆ ದೇಶ ಕಟ್ಟುವ ಹಾಗೂ ದೇಶದ ಕೀರ್ತಿ ಹೆಚ್ಚಿಸುವ ಕೆಲಸವಾಗಬೇಕು, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಸೇವೆ ಹೇಗೆ ದೇಶಕ್ಕೆ ಮಾದರಿಯಾಗಿದೆ ಹಾಗೆಯೇ ನಮ್ಮೇಲ್ಲರ ಸೇವೆ ಕೂಡ ದೇಶದ ಕೀರ್ತಿ ಹೆಚ್ಚಿಸಬೇಕಾಗಿದೆ ಎಂದು ಕಿವಿ ಮಾತನಾಡಿದ್ದರು.
ಗೌರವ ಅತಿಥಿಗಳಾಗಿ ಆಗಮಿಸಿದ ಟಾಟಾ ಏಜನ್ಸಿಯ ನಿದೇಶಕರಾದ ಜಿತೇಂದ್ರ ಫಣಿ , ಖಜಾಂಚಿಯಾದ ಓಂಕಾರ ಪಟೀಲ್, ದಿಲೀಪ ನಿಟ್ಟೂರೆ, ಮಹೇಶ ಬುರೇಂದೆ, ರಾಜಶೇಖರ ಕರಪೂರ, ಸಂದೀಪ ಕಾಡಾದೆ, , ಶಿವಕುಮಾರ ಪಾಟೀಲ, ಸಂತೋಷ ಸುಂಕದ ಪ್ರಲ್ಹಾದ್, ಹಿರಿಯ ಪತ್ರಕರ್ತರಾದ ಶಿವಶರಣಪ್ಪಾ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಭವ್ಯ ಮೇರವಣಿಗೆ ಜರುಗಿತು, ಖ್ಯಾತ ಉದ್ಯಮಿಗಳಾದ ಸೋಮಶೇಖರ್ ಪಾಟೀಲ್ ಗಾದಗಿ ಅವರು ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆಗೈದು ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಬಸವೇಶ್ವರ ವೃತ್ತದಿಂದ ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರದ ಮೆರವಣಿಗೆ ಜರುಗಿತು.
ಮೇರವಣಿಗೆಯೂ ನಗರದ ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡು, ಭಗತಸಿಂಗ ವೃತ್ತ, ಅಂಬೇಡ್ಕರ್ ವೃತ್ತ, ಕನ್ನಡಾಂಬೆ ವೃತ್ತದ ಮೂಲಕ ಡಾ. ಚೆನ್ನಬಸವ ರಂಗಮಂದಿರಕ್ಕೆ ತಲುಪಿ ಮುಕ್ತಾಯಗೊಂಡಿತ್ತು.