ರೈತಸಿರಿ ರೈತರಿಗೆ ಕಾಮಧೇನು ಕಲ್ಪವೃಕ್ಷವಾಗಲಿ:ಸಚಿವ ಪಾಟೀಲ
ಬಸವನಬಾಗೇವಾಡಿ:ಸೆ.17: ರೈತರು ಪ್ರತಿಯೊಬ್ಬರ ಹಸಿವನ್ನು ನೀಗಿಸುವ ಮೂಲಕ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ ರೈತರ ಬದುಕು ಹಸನಾಗುವಂತೆ ಮಾಡಲು ರೈತಸಿರಿ ರೈತರಿಗೆ ಕಾಮದೇನು ಕಲ್ಪವೃಕ್ಷವಾಗಲಿ ಎಂದು ರಾಜ್ಯ ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನೂತನವಾಗಿ ಕಾರ್ಯಾರಂಭ ಮಾಡುತ್ತಿರುವ ರೈತಸಿರಿ ಸೌಹಾರ್ದ ಸಹಕಾರಿ ಸಂಘ ನಿ.. ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕೃಷಿ ಅವಲಂಬಿತ ರೈತರು ಕೃಷಿ ಭೂಮಿಯ ಕುರಿತು ಹೆಚ್ಚಿನ ಅಧ್ಯಯನ ಮಾಡಿ ಕೃಷಿ ಚಟುವಟಿಕೆ ಕಾರ್ಯಾರಂಭ ಮಾಡುವದರ ಜೊತೆಗೆ ಮಿತವಾಗಿ ರಾಸಾಯನಿಕ ಗೊಬ್ಬರ ಹಾಗೂ ಹೆಚ್ಚಿನ ಪ್ರಮಾಣದ ಸಾವಯವ ಗೊಬ್ಬರವನ್ನು ಬಳಕೆ ಮಾಡುವದರೊಂದಿಗೆ ವೈಜ್ಞಾನಿಕ ಕೃಷಿ ಪದ್ದತಿಯನ್ನು ರೂಡಿಸಿಕೊಂಡಲ್ಲಿ ಒಂದು ಬೆಳೆ ಕೈಕೊಟ್ಟಲ್ಲಿ ಇನ್ನೊಂದು ಬೆಳೆಯಿಂದ ಹೆಚ್ಚಿನ ಆದಾಯ ಪಡೆಯಬಹುದಾಗಿದೆ ಎಂದರು.
ರಾಜ್ಯದಲ್ಲಿ ಕ್ಷೀರ ಕ್ರಾಂತಿಯಾಗುತ್ತಿರುವದರಿಂದ ಗ್ರಾಮೀಣ ಪ್ರದೇಶದಲ್ಲಿ ನೀರಿಗಿಂತ ಹಾಲಿನ ಬೆಲೆ ಕಡಿಮೆಯಾಗುತ್ತಿರುವದು ರೈತನ ಕೊಡುಗೆಯಾಗಿದೆ. ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ವಿಜಯಪುರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಕ್ಷೀರ ಕ್ರಾಂತಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ 60-65ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತಿರುವದು ದೇಶಕ್ಕೆ ಮಾದರಿಯಾಗಿದೆ ಎಂದರು.
ಯರನಾಳ ವಿರಕ್ತಮಠದ ಶ್ರೀ ಗುರು ಸಂಗನಬಸವ ಮಹಾಸ್ವಾಮಿಜಿಗಳು ಮಾತನಾಡಿ ಸಹಕಾರ ಸಂಘಗಳು ರೈತರ ಬದುಕನ್ನು ಹಸನಾಗುವಂತೆ ಮಾಡಿವೆ, ಗುಜರಾತ ರಾಜ್ಯದಲ್ಲಿ ನೀರಾವರಿ ಪ್ರದೇಶ ಹೊಂದಿಲ್ಲವಾದರು ದೇಶದಲ್ಲಿಯೇ ಹೈನುಗಾರಿಕೆಗೆ ಪ್ರಸಿದ್ದಿ ಪಡೆದಿದೆ.ಆದರೆ ನಮ್ಮ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಸ್ವಲ್ಪ ಪ್ರಮಾಣದಲ್ಲಿ ಇದೆ.ಅದಕ್ಕೆ ತಾವು ಕೂಡಾ ಹೈನುಗಾರಿಕೆಯನ್ನು ಕಷ್ಠ ಪಟ್ಟು ಮಾಡಿದರೆ ದೇಶದಲ್ಲಿಯೇ ನಂ 1 ಹೈನುಗಾರಿಕೆ ಜಿಲ್ಲೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಭವಿಷ್ಯದಲ್ಲಿ ರೈತಸಿರಿ ಉತ್ತರೊತ್ತರವಾಗಿ ಬೆಳೆದು ರಾಜ್ಯಕ್ಕೆ ಮಾದರಿಯಾಗಿ ಬೆಳಗಲಿ ಎಂದು ಆಶಿರ್ವದಿಸಿದರು.
ವಿಡಿಸಿಸಿ ಬ್ಯಾಂಕ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ರೇವಣಸಿದ್ದ ಮಣೂರ, ವಿಠ್ಠಲ ಸಿಂದೆ ಮಾತನಾಡಿದರು. ಈ ಸಂದರ್ಭದಲ್ಲಿ ಬಸನಗೌಡ ಲಿಂಗದಳ್ಳಿ, ರವಿಗೌಡ ಪಾಟೀಲ, ಶಿವನಗೌಡ ಗುಜಗೊಂಡ, ಎಸ್.ಎಸ್.ತಳೇವಾಡ, ಸುರೇಶ ಹಾರಿವಾಳ, ಪಾಂಡಪ್ಪ ಔರಸಂಗ, ಭೀಮಗೊಂಡ ಹತ್ತರಕಿ, ಮೋದಿಲಾಲ ಕೋರಬು, ಬಾಬುಗೌಡ ಪಾಟೀಲ, ರಾಮಣ್ಣ ಒಂಟಗೋಡಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಬ್ಬೀರ ರೇವುರಕರ ಸೇರಿದಂತೆ ಇತರರು ಇದ್ದರು. ರೈತಸಿರಿ ಸೌಹಾರ್ದ ಸಹಕಾರ ಸಂಘ ನಿ..ಅಧ್ಯಕ್ಷ ಭಾಗ್ಯರಾಜ ಸೊನ್ನದ ಸ್ವಾಗತಿಸಿದರು, ಸಂಗಮೇಶ ಗೆಣ್ಣುರ ನಿರೂಪಿಸಿದರು.ಸಂಗಮೇಶ ಸಾತಲಗಾವಿ ವಂದಿಸಿದರು.