ಸಂಗೊಳ್ಳಿ ರಾಯಣ್ಣ ಹಾಗೂ ಭಗತ್ ಸಿಂಗ್ ಮೂರ್ತಿ ಅನಾವರಣ
ಔರಾದ್ : ಸೆ.17:ತಾಲೂಕಿನ ಕೌಠಾ (ಬಿ) ಗ್ರಾಮದಲ್ಲಿ ಭಾನುವಾರ ಸಂಗೊಳ್ಳಿ ರಾಯಣ್ಣ ಹಾಗೂ ಭಗತಸಿಂಗ್ ಮೂರ್ತಿ ಉದ್ಘಾಟನೆ ಸಮಾರಂಭ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಸಂಗೊಳ್ಳಿ ರಾಯಣ್ಣ ಹಾಗೂ ಭಗತಸಿಂಗ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶಕ್ಕಾಗಿ ಮಡಿದ ಮಹನೀಯರಾಗಿದ್ದಾರೆ. ಇವರ ಹೋರಾಟದ ಕಿಚ್ಚು ಇಂದಿನ ಯುವಕರಿಗೆ ಆದರ್ಶವಾಗಿರಬೇಕು.
ಜಗಳವಾಡುವ ಬದಲು ಜನಗಳಿಗೆ ಸತ್ಯ ವಿಚಾರಗಳ ಬಗ್ಗೆ ಜಾಗೃತಗೊಳಿಸುವುದು ಬಹುಮುಖ್ಯ ಎಂದ ಅವರು, ಮಹಾತ್ಮರು, ಸಂತರು, ದಾರ್ಶನಿಕರು ಸತ್ಯದ ಪ್ರತಿಪಾದನೆ ಮಾಡಿದ್ದು, ಆ ಸತ್ಯವನ್ನು ನಾವು ಅರಿತು ಜೀವನ ನಡೆಸಿ ಸುಂದರ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಈಶ್ವರಸಿಂಗ್ ಠಾಕೂರ್ ಮಾತನಾಡಿ, ಜಾತಿ, ಮತ, ಧರ್ಮಕ್ಕಿಂತ ದೇಶ ಮುಖ್ಯ ಎಂಬ ವಿಚಾರಗಳು ಮಕ್ಕಳಲ್ಲಿ ತಾಯಂದಿರು ಬಿತ್ತಬೇಕು. ಇಂದು ನಡೆದ ಉಭಯ ಮೂರ್ತಿ ಪ್ರತಿಷ್ಠಾಪನೆಯೇ ಸೌಹಾರ್ದತೆ, ಸಾಮರಸ್ಯದ ಪ್ರತೀಕವಾಗಿದ್ದು, ಭಾರತ ಬಯಸುವುದು ಕೂಡ ಇದನ್ನೆ ಎಂದರು.
ಪೂಜ್ಯ ಹವಾಮಲ್ಲಿನಾಥ್ ಮಹಾರಾಜರು, ಅಮೃತ ಮಹಾರಾಜರು, ಬೀರಲಿಂಗೇಶ್ವರ ಪಟ್ಟದ ಪೂಜಾರಿ ಗೋಪಾಲ ಮುತ್ಯಾ, ಕಾಂಗ್ರೆಸ್ ಮುಖಂಡ ಡಾ. ಭೀಮಸೇನ್‍ರಾವ ಸಿಂಧೆ, ಅಮೃತರಾವ ಚಿಮಕೋಡೆ, ಶಿವಶರಣಪ್ಪ ವಾಲಿ, ಅಮೃತರಾವ ಚಿಮಕೋಡೆ, ಪೀರಪ್ಪ ಔರಾದೆ, ಈಶ್ವರಸಿಂಗ್ ಠಾಕೂರ್, ಮನ್ಪ್ರೀತ್ ಸಿಂಗ್ ಮೌಂಟಿ, ಸಂಜೀವಕುಮಾರ್ ಅತಿವಾಳೆ, ವೀರಶೆಟ್ಟಿ ದೀನೆ, ಶ್ರಾವಣಕುಮಾರ ಭಂಡೆ, ಪ್ರದೀಪ ಬೇಂದ್ರೆ, ಲೋಕೇಶ್ ಮರ್ಜಾಪೂರ್, ಶಿವಕುಮಾರ ಬೆಲ್ದಾಳ, ಮಲ್ಲಿಕಾರ್ಜುನ ಕಾಳಗೊಂಡ್, ಆನಂದ ಮಂದಕನಳ್ಳಿ, ರವಿ ದೇವರೆ, ಸಂದೀಪ ಮೇತ್ರೆ, ಗಣಪತಿ ಮೇತ್ರೆ, ಮಾದಪ್ಪ ಕೋಟೆ ಸೇರಿದಂತೆ ಇನ್ನಿತರರಿದ್ದರು.
ನಿವೃತ್ತ ಯೋಧರಿಗೆ ಗೌರವ ಸನ್ಮಾನ :
ನಿವೃತ್ತ ಯೋಧರಾದ ದೇವೆಂದ್ರ ದೊಡ್ಮನಿ, ಶಿವಶರಣಪ್ಪ ಬಿರಾದಾರ, ಮಲ್ಲಿಕಾರ್ಜುನ ಬೆಲ್ದೆ, ಶ್ರೀಮಂತ ಕಾರಾಮುಂಗೆ, ಸಲ್ಲಾವುದ್ದಿನ್ ಮುಲ್ಲಾ, ಸೇರಿದಂತೆ ಕರ್ತವ್ಯದಲ್ಲಿರುವ ಯೋಧರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.