ಸ್ವಾತಂತ್ರಕ್ಕಾಗಿ ತ್ಯಾಗ , ಬಲಿದಾನಗೈದವರ ಸ್ಮರಿಸೋಣ: ಡಾ. ಕ್ಯಾತನಾಳ
ಕಲಬುರಗಿ: ಸೆ.17. ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಆಸಂಖ್ಯ ಹೋರಾಟಗಾರರ, ತ್ಯಾಗ ಬಲಿದಾನಗಳ ಫಲವಾಗಿ ಸರ್ದಾರ ವಲ್ಲಭಭಾಯಿ ಪಾಟೇಲರ ಸಂಕಲ್ಪ ಶಕ್ತಿಯಿಂದಾಗಿ ಕಲ್ಯಾಣ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಇದಕ್ಕಾಗಿ ಹೋರಾಡಿದ ಎಲ್ಲಾ ಮಹಾನೀಯರನ್ನು ನಾವೆಲ್ಲರೂ ಸ್ಮರಿಸಿ ಗೌರವಿಸೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ. ಸರ್ದರ್ ವಲ್ಲಭಭಾಯಿ ಪಾಟೇಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ಧ್ವಜಾರೋಹಣವನ್ನು ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲೆಡೆ ಸ್ವಾತಂತ್ರ ಸಿಕ್ಕದ್ದರು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ತಡವಾಗಿ ಸ್ವತಂತ್ರ ಸಿಕ್ಕಿದೆ. ಇದಕ್ಕಾಗಿ ಆನೇಕರ ತ್ಯಾಗ, ಹೋರಾಟಗಳ ಸ್ಮರಣೆ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಲರ ನಿಯಂತ್ರಣಾಧಿಕಾರಿಗಳು ಡಾ.ವಿವೇಕಾನಂದ ರೆಡ್ಡಿ , ಜಿಲ್ಲಾ ಕುಷ್ಠರೋಗ ಕಾರ್ಯಕ್ರಮ ಆಧಿಕಾರಿಗಳು ಡಾ.ರಾಜಕುಮಾರ ಕುಲ್ಕರ್ಣಿ. ಜಿಲ್ಲಾ ಎನ್ ವಿಬಿಡಿಸಿಪಿ ಅಧಿಕಾರಿಗಳು ಡಾ.ಬಸವರಾಜು ಗುಳಗಿ. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಕಾಂತ ನರಿಬೊಳಿ. ಜಿಲ್ಲಾ ಡಿ ಎಲ್ ಓ ವೈಧ್ಯಾಧಿಕಾರಿ ಡಾ. ವಿಜಯಲಕ್ಷ್ಮಿ ವಲ್ಯಾಪುರೆ ಜಿಲ್ಲಾ ಸಹಾಯಕ ಆಡಳಿತಾಧಿಕಾರಿ ಪಿ ಪಿ ನಾಯಕ್ , ಜಿಲ್ಲಾ ಜಿಲ್ಲಾ ದಂತ ಆರೊ?ಗ್ಯ ವೈದ್ಯಾಧಿಕಾರಿ ಡಾ. ಸಂಧ್ಯಾ ಕಾನೇಕರ್ . ಜಿಲ್ಲಾ ಶುಶ್ರೂಷಣಾಧಿಕಾರಿ ತಿಪ್ಪಮ್ಮ ಮಾನಕರ್ . ಜಿಲ್ಲಾ ತಾಯಿ ಮತ್ತು ಮಕ್ಕಳ ಆರೈಕೆ ಸಮಾಲೋಚಕರು ಮಂಜುನಾಥ ಕಂಬಾಳಿಮಠ ಹಾಗೂ ಆಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಧ್ವಜಾರೋಹಣದಲ್ಲಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು, ಜಿಲ್ಲಾ ಆರೊ?ಗ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಚಂದ್ರಕಾಂತ ಏರಿ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕೀಟಶಾಸ್ತ್ರ ತಜ್ಞರು ಚಾಮರಾಜ ದೊಡ್ಡಮನಿ ವಂದಿಸಿದರು .