ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ
ಕಲಬುರಗಿ:ಸೆ.17: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಹಾಬೋಧಿ ಪ್ರಕಾಶನ ಮತ್ತು ಮಹೇಂದ್ರ ಫೌಂಡೇಶನ್ ವಾರ್ಷಿಕೋತ್ಸವ ಮತ್ತು ‘ನವ ಭೌದ್ಧಯಾನ’ ಕೃತಿ ಬಿಡುಗಡೆ ಹಾಗೂ ಸಂಸತ್ ಸದಸ್ಯರಾದ ರಾಧಾಕೃಷ್ಣನ್ ಆರ್. ದೊಡ್ಡಮನಿ ಅವರಿಗೆ ಅಭಿನಂದನಾ ಸಮಾರಂಭ ಸೋಮವಾರ ಸಂಜೆ ಜರುಗಿತು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯರಾದ ಶಂಶೋದ್ದಿನ್ ಪಟೇಲ್, ಬಿ.ಎಸ್.ಮಾಲಿಪಾಟೀಲ, ದಿಶಾ ಪಿಯು ಕಾಲೇಜಿನ ಅಧ್ಯಕ್ಷ ಶಿವಾನಂದ ಖಜೂರ್ಗಿ, ಉಪನ್ಯಾಸಕರಾದ ಎಚ್. ಬಿ.ಪಾಟೀಲ, ರವೀಂದ್ರ ಸಜ್ಜಿ, ಶಿಕ್ಷಕಿ ಗೀತಾ ಭರಣಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ಪೂಜ್ಯ ಭಂತೇ ಸಂಘಪಾಲ, ಸಂಸದ ರಾಧಾಕೃಷ್ಣ ಆರ್.ದೊಡ್ಡಮನಿ, ಸಹ ಪ್ರಾಧ್ಯಾಪಕ ಡಾ.ಸೋಮಶೇಖರ್ ಅಪ್ಪಗೇರೆ, ಪ್ರಮುಖರಾದ ಡಿ.ಚಂದ್ರಶೇಖರಯ್ಯ, ಸುರೇಶ ಎಲ್.ಶರ್ಮಾ, ಡಾ.ಚಂದ್ರಶೇಖರ ದೊಡ್ಡಮನಿ, ಡಾ.ರಾಜೇಂದ್ರ ದೊಡ್ಡಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.