ವಿದ್ಯುತ್ ಪರಿವರ್ತಕ  ಸ್ಥಳಾಂತರಕ್ಕೆ ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.13: ನಗರದ ವಾರ್ಡ್ ನಂ. 32. ಮಾರೆಮ್ಮ ಗುಡಿ. ಬಂಡಿಪಟ್ಟಿ ಪ್ರದೇಶದಲ್ಲಿನ ವಿದ್ಯುತ್ ಪರಿವರ್ತಕವನ್ನು
ಸ್ಥಳಾಂತರ ಮಾಡಬೇಕೆಂದು ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದೆ.
ವಿದ್ಯುತ್ ಪರಿವರ್ತಕ ಇರುವ ಈ ಪ್ರದೇಶ ಹೆಚ್ಚು ಜನನಿಬಿಡದಿಂದ ಕೂಡಿದ್ದು. ಮಕ್ಕಳು, ವೃದ್ಧರು ಓಡಾಡುವ, ಸುತ್ತಾ ಮುತ್ತಾ ಗುಡಿಗಳು ಕೂಡ  ಇವೆ.  ವಿದ್ಯುತ್ ಕಂಬಕ್ಕೆ ಯಾವುದೇ ರಕ್ಷಣೆ ಬೇಲಿ ಇಲ್ಲದ ಕಾರಣ ಅವಘಡಗಳು ಜರುಗುವ ಸಂಭವ ಇದ್ದು.  ಈ ವಿದ್ಯುತ್ ಪರಿವರ್ತಕವನ್ನು ಬೇರೊಂದು ಕಡೆಗೆ ವರ್ಗಾಹಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ಸೇನಾ ಸಮಿತಿಯ ರಾಜ್ಯಾಧ್ಯಕ್ಷ ಪಿ.ಶೇಖರ್, ಬಂಡಿಹಟ್ಟಿ ಶಾಖೆಯ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ರಮೇಶ್, ಗೌರವ ಅಧ್ಯಕ್ಷ ತಿಮ್ಮಣ್ಣ, ರೈತ ಘಟಕದ ಅಧ್ಯಕ್ಷ ಬಸವರಾಜ್, ರಘು, ಹನುಂಮತಪ್ಪ, ಹೆಚ್.ಸಿದ್ದೇಶ ಮೊದಲಾದವರು ಇದ್ದರು.
One attachment • Scanned by Gmail