ಸರಳಾದೇವಿ ಕಾಲೇಜಿನ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.13:  ನಗರದ ಸರಳಾದೇವಿ  ಕಾಲೇಜಿನ ಆವರಣದಲ್ಲಿ ಪೇವರ್ಸ್ ಅಳವಡಿಸುವ ಕಾಮಗಾರಿಗೆ ಶಾಸಕ ಭರತ್ ರೆಡ್ಡಿ ನಿನ್ನೆ   ಭೂಮಿ ಪೂಜೆ ನೆರವೇರಿಸಿದರು.
 ಕಾಮಗಾರಿಯ ಅಂದಾಜು ಮೊತ್ತ ರೂ. 15.75 ಲಕ್ಷಗಳು.  ಕಾರ್ಯಕ್ರಮದಲ್ಲಿ  ಮೇಯರ್  ಬಿ.ಶ್ವೇತ ಪಾಲಿಕೆ ಸದಸ್ಯ ಅಶೋಕ್ ಕುಮಾರ್.ಕೆ.ಎಸ್ ಹಾಗೂ ಕಾಲೇಜಿನ ಪ್ರಾಂಶುಪಾಲರು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.