ರಾಷ್ಟ್ರೀಯ ದಂತ ವೈದ್ಯರ   ದಿನಾಚರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.13:  ಭಾರತೀಯ ದಂತ ವೈದಯಕೀಯ ಸಂಘದ, ಬಳ್ಳಾರಿ ಶಾಖೆ ರಾಷ್ಟ್ರೀಯ ದಂತ ವೈದ್ಯರ   ದಿನಾಚರಣೆಯನ್ನು ನಗರದ ರೂಟ್ಸ್ ಪಬ್ಲಿಕ್ ಶಾಲೆಯಲ್ಲಿ ಆಚರಿಸಲಾಯ್ತು.
ಹಿರಿಯ ದಂತ ವೈದ್ಯ ಡಾ. ಶೇಷಗಿರಿ ರಾವ್, ಡಾ. ದಿವಾಕರ್ ಎಸ್, ಜಿಲ್ಲಾ ಅಧ್ಯಕ್ಷ ಡಾ. ಮಧುಸೂದನ ರೆಡ್ಡಿ, ಕಾರ್ಯದರ್ಶಿ ಡಾ. ಶ್ರೀಧರ್ ರೆಡ್ಡಿ, ಖಾಜಾಂಚಿ ಡಾ. ವಿ.ವಿ ರಾಜೀವ್ ಹಾಗು ಬಳ್ಳಾರಿ ಐ.ಡಿ.ಎ ಯಿಂದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಪ್ರಶಾಂತ್.ಆರ್ ಹಾಗು ಬಳ್ಳಾರಿ ಐಡಿಎ ರಾಜ್ಯ ಪ್ರತಿನಿಧಿ ಡಾ.ಮಂಜುನಾಥ ಆರ್. ಕೆ ಇವರುಗಳು ಸೇರಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಹಿರಿಯ ದಂತ ವೈದ್ಯರು ಡಾ. ಶೇಷಗಿರಿರಾವ್  ಮಾತನಾಡಿ, ದಂತ ವೈದ್ಯ ಚಿಕಿತ್ಸೆ 1970ರಿಂದ ಇಲ್ಲಿಯವರೆಗೆ ಹಲ್ಲು ಉದುರುವುದರಿಂದ, ಹಲ್ಲು ಕಟ್ಟುವುದು ಹಾಗು ಎಲ್ಲಾ ತರಹದ ಚಿಕಿತ್ಸೆ ನವೀಕರಣಗೊಂಡ ಜನರಿಗೆ ಉತ್ತಮ ಚಿಕಿತ್ಸೆ ಕೊಡುವುದಲ್ಲಿ ದಂತ ವೈದ್ಯರು ಹೆಮ್ಮೆ ಪಡುವ ದಿನ ಬಂದಿದೆ ಎಂದು ಹೇಳಿದರು.
ಡಾ. ಮಧುಸೂದನ ರೆಡ್ಡಿ.ಡಿ ದಂತ ದಿನಾಚರಣೆ ಬಗ್ಗೆ ವಿವರಿಸಿದರು.  ಹಿರಿಯ ದಂತ ವೈದ್ಯರು ಕಾರ್ಯದರ್ಶಿಗಳು ಡಾ. ಶ್ರೀಧರ್ ರೆಡ್ಡಿ.ಜೆ ರವರು ದಂತ ಆಚಾರಣೆ ಯಾಕೆ ಮಾಡಬೇಕೆಂದು ಸಂಕ್ಷಿಪ್ತವಾಗಿ ವಿವರಿಸಿದರು. ಹಿರಿಯ ದಂತ ವೈದ್ಯ ಡಾ. ರಫೀಉದ್ದೀನ್  ಅವರನ್ನು ದಂತ ವೈದ್ಯ ಪಿತಾಮಹಾ ಎಂದು ಕರೆಯಲಾಗುತ್ತದೆ ಅವರು ಅಂದಿನ  ದಿನಮಾನಗಳಲ್ಲಿ ಪಾಶ್ಚಾತ್ಯ ದೇಶದಿಂದ ದಂತ ಚಿಕಿತ್ಸೆಯಲ್ಲಿ ಪದವಿಯನ್ನು ಪಡೆದಿದ್ದು  ಅದು ಎಲ್ಲರಿಗೂ ಭಾರತೀಯರಿಗೆ ಅನುಕೂಲವಾಗಿಬೇಕೆಂದು ದಂತ ವೈದ್ಯಕೀಯ ಕಾಲೇಜು ಸ್ಥಾಪಿಸಿದರು ಎಂದು ತಿಳಿಸಿದರು.
ಈ ವೇಳೆ ಹಿರಿಯ ಪತ್ರಕರ್ತ ಎಂ.ಅಹಿರಾಜ್ ಮತ್ತು ನಾಗಭೂಷಣ್ ಅವರನ್ನು ಸನ್ಮಾನಿಸಲಾಯ್ತು.