ವೀ.ಸಂಘದ ಚುನಾವಣೆದಂಪತಿಗಳ ಪ್ರಚಾರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.13: ಈ ತಿಂಗಳ 17 ರಂದು ನಡೆಯಲಿರುವ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ನೂರಕ್ಕೂ ಹೆಚ್ಚು ಜನ ತೊಡಗಿಸಿಕೊಂಡಿದ್ದರೂ, ಇದರಲ್ಲಿ ಮತದಾರರ ಗಮನ ಸೆಳೆಯುತ್ತಿರುವುದು ಈ ದಂಪತಿಗಳು.
ಹಿರಿಯರ ತಂಡದಿಂದ ನಡೆದಿರುವ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಯಾಗಿರುವ. ಹಾಲಿ ಎಸ್.ಜಿ.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಕಾತ್ಯಾಯಿನಿ ಅವರು ಇತರೇ ಅಭ್ಯರ್ಥಿಗಳ ಜೊತೆಗೂಡಿ ನನಗೆ ಮತ್ತೊಮ್ಮೆ ಮತ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಸದಾ ಇವರ ಜೊತೆಯಲ್ಲಿರುವ ಇವರ ಪತಿ ವಿ.ಎಸ್.ಮರಿದೇವಯ್ಯ ಅವರು ಅಭ್ಯರ್ಥಿಗಳು ಮತಯಾಚನೆಯ ನಂತರ. ಪೂರ್ಣ ಪ್ರಮಾಣ 30 ಮತಗಳನ್ನು ತಂಡದ ಎಲ್ಲಾ ಅಭ್ಯರ್ಥಿಗಳಿಗೆ ಹಾಕಿ. ತಂಡ ಬಂದರೆ ಮಾತ್ರ ನಿಮ್ಮ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯ ಎಂದು ಮತದಾರರಲ್ಲಿ ಮನವಿ ಮಾಡುತ್ತಾರೆ.
ಅಪ್ಪಿ ತಪ್ಪಿ ನನ್ನ ಪತ್ನಿ ಕಾತ್ಯಾಯಿನಿಗೆ  ಮತ ನೀಡಿ ಎಂದು ಕೇಳಲ್ಲ. ಆದರೆ ಅನೇಕ ಮತದಾರರು ನಿಮ್ಮ ಮನೆಯವರೂ ಇದ್ದಾರೆ. ಅವರಿಗೂ ಮತ ನೀಡುತ್ತೇವೆ ಎಂಬ ಮಾತುಗಳನ್ನು ಆಡುತ್ತಾರೆ.
ಒಟ್ಟಾರೆ ಎಲ್ಲಿಯೇ ಪ್ರಚಾರಕ್ಕೆ ಹೋದರು ಸತಿ ಪತಿಗಳು ಒಂದಾಗಿ ನಡೆದರೂ, ಮತಯಾಚನೆಯ ಸ್ವರೂಪ ಮಾತ್ರ ಭಿನ್ನವಾದುದು. ಒಬ್ಬರು ತಮಗೆ ಕೇಳಿದರೆ. ಮತ್ತೊಬ್ಬರು ಇಡೀ ತಂಡಕ್ಕೆ ಕೇಳುತ್ತ ಮತದಾರರ ಗಮನ ಸೆಳೆಯುತ್ತಿದ್ದಾರೆ.