ಭೂಮಿ ಪೂಜೆ
ಲಕ್ಷ್ಮೇಶ್ವರ,ಮಾ.13:ಪಟ್ಟಣದ ಶಿಗ್ಲಿ ರಸ್ತೆಯಲ್ಲಿರುವ ಟಿಬಿ ಮಾನ್ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರು ನೂತನವಾಗಿ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ನಾಲ್ಕು ಕೊಠಡಿಗಳ ನಿರ್ಮಾಣ ಅಚ್ಚುಕಟ್ಟಾಗಿ ಮತ್ತು ನಿಗದಿತ ಅವಧಿಯಲ್ಲಿ ಮುಗಿಸುವಂತೆ ಸೂಚಿಸಿದ ಅವರು ಕಾಲೇಜಿನಲ್ಲಿನ ಕೊಠಡಿಗಳ ಸಂಖ್ಯೆಯ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅನುಕೂಲವಾಗಿತ್ತು ಈ ನಾಲ್ಕು ಕೊಠಡಿಗಳ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರವೇಶ ನೀಡಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಎಫ್‍ಎಚ್ ತಿಮ್ಮಾಪುರ ಶಿರಹಟ್ಟಿ ಮಂಡಲ್ ಬಿಜೆಪಿ ಅಧ್ಯಕ್ಷರಾದ ಸುನಿಲ್ ಮಹಾಂತ ಶೆಟ್ಟರ್ ಕಾಲೇಜಿನ ಪ್ರಾಚಾರ್ಯರಾದ ಕುಬೇರಪ್ಪ ಸಿದ್ದರಾಮಯ್ಯ ಸದಸ್ಯರಾದ ತೋಂಟೇಶ್ ಮಾನ್ವಿ ವಿಶ್ವನಾಥ ಪಾಟೀಲ್ ಪ್ರಶಾಂತ ಗುಡದಪ್ಪನವರ ನವೀನ್ ಬೆಳ್ಳಟ್ಟಿ ವಿಜಯ್ ಕುಂಬಾರ ಸಂತೋಷ್ ಜಾವೂರ್ ಶಕ್ತಿ ಕತ್ತಿ ವಿಶಾಲ್ ಬಟಗುರ್ಕಿ ಉಪನ್ಯಾಸಕರಾದ ಮಂಜುನಾಥ್ ಕೊಕ್ಕರಗುಂದಿ ಸೇರಿದಂತೆ ಅನೇಕರಿದ್ದರು.