ನೇಮಕಕ್ಕೆ ವಿರೋಧ
ಲಕ್ಷ್ಮೇಶ್ವರ,ಮಾ.13: ಸನ್ 2023 ಮತ್ತು 24ನೇ ಸಾಲಿನ ಪರೀಕ್ಷೆಗಳಲ್ಲಿ ಕೊಠಡಿ ಮೇಲ್ವಿಚಾರಕರನ್ನಾಗಿ ಪ್ರೌಢಶಾಲಾ ಶಿಕ್ಷಕರನ್ನು ಕಡೆಗಣಿಸಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಆದೇಶಕ್ಕೆ ಮಾಧ್ಯಮಿಕ ಶಾಲಾ ನೌಕರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಪಟ್ಟಣದಲ್ಲಿ ಮಂಗಳವಾರ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾದ ಎಲ್‍ಎಸ್ ಅರಳಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಪ್ರೌಢಶಾಲಾ ಶಿಕ್ಷಕರು ಮುಖ್ಯಮಂತ್ರಿಗಳ ಹೆಸರಿಗೆ ಬರೆದ ಪತ್ರವನ್ನು ತಾಲೂಕ ತಹಶೀಲ್ದಾರರಾದವಾಸದೇವ್ ಸ್ವಾಮಿಯವರಿಗೆ ಪ್ರವಾಸಿ ಮಂದಿರದಲ್ಲಿ ಸಲ್ಲಿಸಿದರು.
ಮಾಧ್ಯಮಿಕ ಶಾಲಾ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸದೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅವಕಾಶ ನೀಡಿರುವುದು ಒಂದು ರೀತಿ ಮಾಧ್ಯಮಿಕ ಶಾಲಾ ನೌಕರರ ಮೇಲೆ ಸರ್ಕಾರದ ವಿಶ್ವಾಸವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುವುದು ಖಂಡನೆ ಎಂದು ಕೂಡಲೇ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆದು ಮೊದಲಿನಂತೆ ಪ್ರೌಢಶಾಲಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಬೇಕು ಎಂದು ಮನವಿ ಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕರಾದ ಅಶೋಕ ಲಿಂಗ ಶೆಟ್ಟಿ ಜಾಪಣ್ಣ ಲಮಾಣಿ ಕೆ ರವಿ ಬಿಬಿ ಬಳಿಗಾರ ಅಶೋಕ್ ಛತ್ರ ದ ಎಬಿ ಹೂಗಾರ್ ವಿ ಎನ್ನ್ ಶೆಟ್ಟರ್ ಈಶ್ವರ್ ಮೆಡ್ಲೇರಿ ಸೇರಿದಂತೆ ಅನೇಕರಿದ್ದರು.