ಮಹಿಳಾ ಸಾಧನೆಗೆ ಪ್ರೋತ್ಸಾಹ ಅಗತ್ಯ: ಶ್ವೇತಾ ಬೀಡಕರ
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ. 13: ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಸಬಲರಾಗುತ್ತಿದ್ದಾರೆ ಎಂದು ವಿಜಯಪುರ ಉಪವಿಭಾಗಾಧಿಕಾರಿ ಶ್ವೇತಾ ಎಂ. ಬೀಡಕರ ಹೇಳಿದ್ದಾರೆ.
ತಿಕೋಟಾ ಪಟ್ಟಣದ ಬಿ.ಎಲ್.ಡಿ.ಇ ನಸಿರ್ಂಗ್ ಕಾಲೇಜಿನಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಪೆÇೀಷಕರೂ ಕೂಡ ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಯುವತಿಯರೂ ಕೂಡ ತಾವು ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿಗಳಾಬಹುದು ಎಂದು ಅರ್ಥೈಸಿಕೊಂಡು ಈಗ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗಿಂತಲೂ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಅವರಿಗೆ ಆಸಕ್ತವಾಗಿರುವ ವಿಷಯಗಳಲ್ಲಿ ಅಧ್ಯಯನ, ಸಾಧನೆ ಮಾಡಲು ಎಲ್ಲರೂ ಪೆÇ್ರೀತ್ಸಾಹ ನೀಡಬೇಕು ಎಂದು ಅವÀರು ಹೇಳಿದರು.
ಇದೇ ವೇಳೆ ಅವರು ನಾನಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಮಹಿಳಾ ಅಧ್ಯಾಪರಕರಿಗೆ ಸ್ಮರಣ ಸಂಚಿಕೆ ನೀಡಿ ಗೌರವಿಸಿದರು.
ಕಾಲೇಜಿನ ಪ್ರಾಚಾರ್ಯಡಾ. ಪ್ರಕಾಶ ಸಿದ್ದಾಪುರ ಮಾತನಾಡಿ, ಸ್ವಾತಂತ್ರ ಹೋರಾಟಗಾರರಾದ ಕಿತ್ತೂರು ರಾಣಿಚನ್ನಮ್ಮ, ಬೆಳವಾಡಿ ಮಲ್ಲಮ್ಮ, ಒನಕೆ ಓಬವ್ವ, ಜಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದ ಮಹಿಳೆಯರು ನಮಗೆಲ್ಲರಿಗೂ ಆದರ್ಶರಾಗಿದ್ದಾರೆ. ಅವರಿಂದ ಪ್ರೇರಣೆ ಹೊಂದಿ ಮಹಿಳೆಯರು ಅತ್ಯುತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕಿ ಬಸಲಿಂಗಮ್ಮ ಹಯ್ಯಾಳ ವಿಶ್ವ ಮಹಿಳಾ ದಿನಾಚರಣೆಯ ವಿಷಯದ ಕುರಿತು ವಿವರಿಸಿದರು,
ಈ ಸಂದರ್ಭದಲಿ ್ಲಕಾಲೇಜಿನ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಆಕಾಶ ಜಾಧವ, ಕಾರ್ಯಕ್ರಮ ಸಂಯೋಜಕಿ ಸಿದ್ದಮ್ಮ ನಾವದಗಿ ಮುಂತಾದವರು ಉಪಸ್ಥಿತರಿದ್ದರು.
ಉಪನ್ಯಾಸಕ ನವನಾಥ ಅಜೂರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಸಿದ್ದಮ್ಮ ನಾವದಗಿ ಪರಿಚಯಿಸಿದರು. ವಿದ್ಯಾರ್ಥಿನಿ ಸಂಜನಾ ಕಪಟಕರ ವಂದಿಸಿದರು. ವಿದ್ಯಾರ್ಥಿನಿಯರಾದ ಪ್ರಗತಿ ಕನಮಡಿ ಮತ್ತು ಐಶ್ವರ್ಯ ಮಂಗಣ್ಣವರ ನಿರೂಪಿಸಿದರು.