ಪಂಚ ಗ್ಯಾರೆಂಟಿಗಳಿಂದ ಜೀವನಮಟ್ಟ ಸುಧಾರಣೆ
ವಿಜಯಪುರ, ಮಾ. ೧೩: ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಮಾತಿನಂತೆ ಪಂಚ ಗ್ಯಾರಂಟಿಗಳಾದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಂತೆ ಪ್ರತಿ ಕುಟುಂಬದ ಮುಖ್ಯಸ್ಥೆಯರಿಗೆ ಹಣ. ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ೫ ಕೆಜಿ ಹೆಚ್ಚುವರಿ ಅಕ್ಕಿಗೆ ಹಣ ನೀಡುವಿಕೆ, ಉಚಿತ ವಿದ್ಯುತ್ ನೀಡುವಿಕೆ ಹಾಗೂ ನಿರುದ್ಯೋಗ ಯುವಕರಿಗೆ ಪಿಂಚಣಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವುದರ ಮೂಲಕ ರಾಜ್ಯದ ಜನರ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಂಡು ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರವಾಗಿದೆ ಎಂದು ಪಟ್ಟಣದ ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ ಸತೀಶ್ ಕುಮಾರ್ ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಆಟದ ಮೈದಾನದ ಬಳಿಯಿಂದ, ಆಲೂರು ದುದ್ದನಹಳ್ಳಿ ಬಳಿಯಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಹೊರಟ ವಾಹನಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಂದಕುಮಾರ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುನಿ ಚಿನ್ನಪ್ಪ, ಮಾಜಿ ಸದಸ್ಯರುಗಳಾದ ಮುನಿಕೃಷ್ಣಪ್ಪ, ಸಂಪತ್ ಕುಮಾರ್, ಹರೀಶ್, ಮುಖಂಡರುಗಳಾದ ಮರವೇ ಕೆಂಪಣ್ಣ, ಮಧು ಉಪಸ್ಥಿತರಿದ್ದರು.