ಮಾ. 23, 24ರಂದು 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.13 :19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 23 ಮತ್ತು 24 ರಂದು ಮಾಡಲು ನಿರ್ಣಯಿಸಲಾಗಿದೆ.
ಮಂಗಳವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಕಾರ್ಯಕಾರಿಣಿ ಸಭೆಯಲ್ಲಿ ಮಾರ್ಚ 23 ಮತ್ತು 24 ರಂದು 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.
ನಾಡುನುಡಿ, ಸಾಹಿತ್ಯ, ಕಲೆ, ಸಂಸ್ಕøತಿ, ಜಾನಪದ, ಚಿತ್ರಕಲೆ, ರಂಗಭೂಮಿ, ನೃತ್ಯ ಮುಂತಾದ ವಿಷಯಗಳ ಮೇಲೆ ಗೋಷ್ಠಿಗಳು ಜರುಗಿಸಲು ಸಭೆಯಲ್ಲಿ ಸಲಹೆಗಳನ್ನು ನೀಡಿದರು. ಜಿಲ್ಲಾ ಗೌರವಾಧ್ಯಕ್ಷೆ ಭಾರತಿ ಪಾಟೀಲ ಮಾತನಾಡಿ, ಜಿಲ್ಲಾ ಸಮ್ಮೇಳನ ಅರ್ಥಪೂರ್ಣವಾಗಿ ಜರುಗುವಂತೆ ನೋಡಿಕೊಳ್ಳುವದು ನಮ್ಮ ಕರ್ತವ್ಯ. ನಾಡುನುಡಿ ಸೇವೆಗೆ ಕನ್ನಡ ಮನಸ್ಸುಗಳು ಹಾಗೂ ಸಂಘ ಸಂಸ್ಥೆಗಳು ತನು ಮನ ಧನದಿಂದ ಸಹಕರಿಸಲು ಮನವಿ ಮಾಡಿಕೊಂಡರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಪದಾಧಿಕಾರಿಗಳು, ಜಿಲ್ಲೆಯ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಿಕೊಂಡರು.
ತಿಕೋಟಾ ತಾಲೂಕಾ ಕಸಾಪ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ ಅವರು ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದಾನಿಗಳಿಂದ ಆರ್ಥಿಕ ಸಹಾಯಕ್ಕೆ ಸಹಕರಿಸಲು ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಗೌರವ ಕಾರ್ಯದರ್ಶಿ ಸುಭಾಸ ಕನ್ನೂರ, ಕಸಾಪ ಕೋಶಾಧ್ಯಕ್ಷÀ ಡಾ. ಸಂಗಮೇಶ ಮೇತ್ರಿ, ಕಮಲಾ ಮುರಾಳ, ಮಹ್ಮದಗೌಸ ಹವಾಲದಾರ, ಶಿಲ್ಪಾ ಭμÉ್ಮ, ರಾಜಾಸಾಹೇಬ ಶಿವನಗುತ್ತಿ, ವಿಜಯಪುರ ತಾಲೂಕ ಅಧ್ಯಕ್ಷ ಡಾ. ಆನಂದ ಕುಲಕರ್ಣಿ, ಬಸವನ ಬಾಗೇವಾಡಿ ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಸಿಂದಗಿ ಕಸಾಪ ಅಧ್ಯಕ್ಷ ಶಿವಾನಂದ ಬಡಾಣುರ , ಮುದ್ದೇಬಿಹಾಳದ ಪದಾಧಿಕಾರಿಗಳಾದ ಪ್ರಶಾಂತ ಕಾಳೆ, ಬಸವರಾಜ ಮೇಟಿ, ಶಾಂತಪ್ಪ ರಾಣಾಗೋಳ, ಅಣ್ಣು ಪಾಟೀಲ, ಸತ್ಯಪ್ಪ ಹಡಪದ, ಸುಖದೇವಿ ಅಲಬಾಳಮಠ, ಅಲ್ಲಿಸಾಬ ಕಡಕೆ, ಅಹ್ಮದ್ ವಾಲೀಕಾರ , ಶಿಲ್ಪಾ ಹಂಜಿ, ಶಿವು ಮಡಿಕೇಶ್ವರ, ಜಿ ಎಸ್ ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ವಾಲೀಕಾರ, ಮಲ್ಲು ವಾಲೀಕಾರ, ಭೀಮು ವಾಲೀಕಾರ, ಸುರೇಶ ಜತ್ತಿ, ಅಣ್ಣುಗೌಡ ಬಿರಾದಾರ, ಅಭಿμÉೀಕ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.