ಕು.ಪೃಥ್ವಿ ಹೆಗಡೆಗೆ ಅಹಿಲ್ಯಾಬಾಯಿ ಹೊಳ್ಕರ ರಾಷ್ಟ್ರೀಯ ಪ್ರಶಸ್ತಿ
ತಾಳಿಕೋಟೆ:ಮಾ.13: ಪಟ್ಟಣದ ಶ್ರೀ.ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ ಭರತನಾಟ್ಯ ಶಿಕ್ಷಕ ವಿನೋದಕುಮಾರ ಚಿಕ್ಕಮಠ ಅವರ ವಿಧ್ಯಾರ್ಥಿನಿ ಪೃಥ್ವಿ ಹೆಗಡೆ ಅವರಿಗೆ ಅಹಿಲ್ಯಾಬಾಯಿ ಹೊಳ್ಕರ ರಾಷ್ಟ್ರೀಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಕೂಲ್ಹಾರ ತಾಲೂಕಿನ ಮಲಘಾಣ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸುಮಾರು 534 ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿದ ಕು.ಪೃಥ್ವಿ ಹೆಗಡೆ ಚಂದನ ವಾಹಿನಿಯಲ್ಲಿ ಹಾಗೂ ಶ್ರೀ ಬಸವ ವಾಹಿನಿಯಲ್ಲಿ 231 ನೃತ್ಯ ಪ್ರದರ್ಶನ ನೀಡಿದ್ದಾರೆ ಹಾಗೂ ಕರ್ನಾಟಕ, ಉತ್ತರ ಪ್ರದೇಶ, ಆದ್ರ ಪ್ರದೇಶ, ಕೇರಳ, ಮಹಾರಾಷ್ಟ್ರ,ದಲ್ಲಿಯೂ ನೃತ್ಯ ಪ್ರದರ್ಶನ ನೀಡಿದ್ದಾಳೆ.
ಈ ಭರತನಾಟ್ಯ ಕಲಾವಿದೆ ಪೃಥ್ವಿ ಹೆಗಡೆ ಅವರಿಗೆ ರಾಷ್ಟ್ರೀಯ ಪ್ರಶಸ್ತಿ. ರಾಷ್ಟ್ರ ಮಟ್ಟದ ಪ್ರಶಸ್ತಿ. ರಾಜ್ಯ ಮಟ್ಟದ ಪ್ರಶಸ್ತಿ, ಅಂತರಾಜ್ಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ತಾಲೂಕು ಪ್ರಶಸ್ತಿ, ಒಳಗೊಂಡು ಹಲವಾರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸದ್ಯ ಪೃಥ್ವಿ ಹೆಗಡೆಗೆ ಅಹಿಲ್ಯಬಾಯಿ ಹೂಳ್ಕರ ರಾಷ್ಟ್ರೀಯ ಪ್ರಶಸ್ತಿ ಲಭಿಸುವದರೊಂದಿಗೆ ತಾಳಿಕೋಟೆಯ ಹಿರಿಮೆಯನ್ನು ಹೆಚ್ಚಿಸಿದ್ದು ವಿಧ್ಯಾರ್ಥಿನಿಯ ಸಾಧನೆಗೆ ಭರತನಾಟ್ಯ ಶಾಲೆಯ ಶಿಕ್ಷಕ ವಿನೋಧ ಚಿಕ್ಕಮಠ ಅವರು ಅಭಿನಂದಿಸಿದ್ದಾರೆ.