ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ: ಬಂಧನ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.13:- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಮಾಡಲು ಮುಂದಾಗಿದ್ದು, ಸಂತೇಮರಹಳ್ಳಿ ವೃತ್ತದಲ್ಲಿಯೇ ಯುವ ಮೋರ್ಚಾ ಅಧ್ಯಕ್ಷ ಸೇರಿದಂತೆ ಅನೇಕರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ ಘಟನೆ ನಡೆಯಿತು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ನೇತೃತ್ವದಲ್ಲಿ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಸಂತೇಮರಹಳ್ಳಿ ವೃತ್ತದಲ್ಲಿ ರಸ್ತೆ ತಡೆ ಮಾಡಿ, ಸಿಎಂ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಮಾಡಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆದು ಪ್ರತಿಭಟನಾಕರಾರನ್ಮ್ನ ಬಂಧಿಸಿದರು.
ಕಾರು ಚಾಲನೆ ಮಾಡುತ್ತಿದ್ದ ಬಿಜೆಪಿ ಮುಖಂಡನನ್ನು ತಡೆದು ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆ ಸ್ಥಳದಲ್ಲಿಯೇ ಇದ್ದ ಜಿಲ್ಲಾ ಕಾರ್ಯದರ್ಶಿ ನಟರಾಜು, ಜಿಲ್ಲಾ ವಕ್ತಾರ ಕಾಡಹಳ್ಳೀ ಕುಮಾರ್ ಅವರು ಪೊಲೀಸರ ವರ್ತನೆಯಿಂದ ಆಕ್ರೋಶಗೊಂಡರು. ಕಾರಿನ ಚಾಲಕ ಮರಿಯಾಲ ಮಹೇಶ್ ಕೂಡ ಇನ್ಸ್‍ಪೆಕ್ಟರ್ ವಿರುದ್ದ ತಿರುಗಿಬಿದ್ದರು. ಕಾರಿನ ಸಹಿತ ಮಹೇಶ್‍ರನ್ನು ಬಂಧಿಸಲು ಮುಂದಾಗುತ್ತಿದ್ದಂತೆ ಆತ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಪ್ರತಿಭಟನೆಯನ್ನು ಸಹ ಮಾಡಿಲ್ಲ. ಏಕೆ ಬಂಧಿಸ್ಮತ್ತಿದ್ದ್ಭಿರಿ, ಕಾರನ್ನು ಏಕೆ ಠಾಣೆಗೆ ಕರೆದೊಯ್ಯತ್ತೀರಿ ಎಚಿದು ಏರಿದ ಧ್ವನಿಯಲ್ಲಿ ಪ್ರಶ್ನೆ ಮಾಡತೊಗಿದರು. ಪಕ್ಷದ ಕಚೇರಿಗೆ ಬಿಜೆಪಿ ಬಾವುಟವನ್ನು ತೆಗೆದುಕೊಂಡು ಹೋಗುತ್ತಿದ್ದಾನೆ. ಬಿಜೆಪಿ ಬಾವುಟ ಇದೆ ಎನ್ನುವ ಕಾರಣಕ್ಕೆ ಕಾರು ಜಪ್ತಿ ಮಾಡುವುದಾದರೆ, ಪೊಲೀಸರÀು ಕಾಂಗ್ರೆಸ್ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ಆತನನ್ನು ಪಕ್ಷದ ಕಚೇರಿಗೆ ಹೋಗಲು ಬಿಡಿ, ಬೇಕಾಗಿದ್ದರೆ ನಿಮ್ಮ ವಾಹನದಲ್ಲಿಯೇ ಆತನನ್ನು ಹಿಂಬಾಲಿಸಿ, ಎಲ್ಲಿಗೆ ಹೋಗುತ್ತಾನೆ ಎಂಬುವುದು ತಿಳಿಯುತ್ತಿದೆ ಎನ್ನುತ್ತಿದ್ದಂತೆ ಪೊಲೀಸರು ಕಾರನ್ನು ಬಿಟ್ಟು ಕಳುಹಿಸಿಕೊಟ್ಟರು.
ಪ್ರತಿಭಟನೆಯಲ್ಲಿ ಯುವಮೋರ್ಚಾ ಅಧ್ಯಕ್ಷ ಸೂರ್ಯಬಾಲರಾಜ್, ಮಾಜಿ ಅಧ್ಯಕ್ಷ ಪ್ರಣಯ್, ಕೂಸಣ್ಣ, ಆನಂದ್ ಭಗೀರಥ ಸೇರಿದಂತೆ ಅನ್ಭೆರು ಪಾಲ್ಗೊಂಡಿದ್ದರು. ಇವರನ್ನು ಪೋಲಿಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.