ಸಂವಿಧಾನ ಬದಲಿಸುವುದು ಬಿಜೆಪಿ ಹಿಡನ್ ಅಜೆಂಡಾ: ಸಿದ್ದರಾಮಯ್ಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.13:- ಸಂವಿಧಾನ ಬದಲಿಸುವುದು ಬಿಜೆಪಿ ಹಿಡನ್ ಅಜೆಂಡಾ, ಸಂಸದ ಅನಂತ ಕುಮಾರ್ ಹೆಗ್ಡೆ ಮೂಲಕ ಹೇಳಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಅವರುತಾಲ್ಲೂಕಿನ ಹೆಗ್ಗವಾಡಿಗ್ರಾಮದಲ್ಲಿ ಮಾಜಿ ಸಂಸದ ದಿವಂಗತಆರ್. ಧೃವನಾರಾಯಣರವರ ಪ್ರಥಮ ವರ್ಷದ ಪುಣ್ಯಸ್ಮರಣೆಗೆ ಆಗಮಿಸಿದ ಸಂದರ್ಭದಲ್ಲಿಮಾಧ್ಯಮವರೊಂದಿಗೆ ಮಾತನಾಡಿ, ಅನಂತಕುಮಾರ್ ಹೆಗ್ಡೆ ಆರ್ಡಿನರಿ ವ್ಯಕ್ತಿಅಲ್ಲಾ, 5 ಸಲ ಸಂಸದರಾಗಿದ್ದವರು, ಸಚಿವರಾಗಿದ್ದವರು, ಸಂವಿಧಾನ ಬದಲಿನ ವಿಚಾರ ಹೇಳಬೇಕಾದರೆ ಪಕ್ಷದತೀರ್ಮಾನಆಗಿರದೇ ಹೇಳಲು ಆಗತ್ತಾ, ಅವರ ವಿರುದ್ಧಏನಾದರೂಕ್ರಮತೆಗೆದುಕೊಂಡರಾಎಂದು ಪ್ರಶ್ನೆ ಮಾಡಿದರು.
ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷಅದಾಗಿದ್ದು, ಮನುವಾದದಲ್ಲಿ ನಂಬಿಕೆ ಇಟ್ಟವರು, ಸಂವಿಧಾನಜಾರಿಯಾದ ದಿನದಿಂದಲೂಅವರು ಸಂವಿಧಾನ ವಿರೋಧ ಮಾಡಿಕೊಂಡೇ ಬಂದಿದ್ದಾರೆ, ಈಗ ಅನಂತಕುಮಾರ್ ಹೆಗ್ಡೆ ಮೂಲಕ ಹೇಳಿಸುತ್ತಿದ್ದಾರೆ ಎಂದರು.
ಸಿಎಎ ಚುನಾವಣಾ ಸಂದರ್ಭದಲ್ಲಿ ಏಕೆ ಜಾರಿ ಮಾಡಬೇಕಿತ್ತು..?ಧರ್ಮದಆಧಾರದ ಮೇಲೆ ಪೌರತ್ವಕೊಡಲು ನಮ್ಮ ವಿರೋಧವಿದೆ, ಎಂದು ಸಿಎಎ ಜಾರಿಗೆಅಸಮಾಧಾನ ವ್ಯಕ್ತಪಡಿಸಿದರು.
ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂಬ ಆರ್.ಆಶೋಕ್‍ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರಾದರೂಕದ್ದು ಮುಚ್ಚಿ ನೀರು ಬಿಡುತ್ತಾರಾ? ನೀರುಇದ್ದರಲ್ಲವಾ ಬಿಡೋದು..?ಅವರು ಹೇಳುವುದು ಸುಳ್ಳು, ತಮಿಳುನಾಡಿಗೆ ತೊಟ್ಟು ನೀರುಕೊಡುವುದಿಲ್ಲ, ಕುಡಿಯಲು ನೀರು ಇಟ್ಟುಕೊಳ್ಳದೇ ನಾವು ಕೊಡುವುದಿಲ್ಲ, ಅವರು ನೀರುಕೊಡಿಎಂದು ಕೇಳೂ ಇಲ್ಲಾ ಸುಮ್ಮಸುಮ್ಮನೇಯಾಕೆ ನೀರುಕೊಡುತ್ತೇವೆ,ತಮಿಳುನಾಡಿಗೆ ನೀರುಕೊಡುವ ಪ್ರಶ್ನೆಯೇಇಲ್ಲಾ, ತಮಿಳುನಾಡು ಕೇಳಿದರೂ ನೀರುಕೊಡಲ್ಲ, ಕೇಂದ್ರ ಹೇಳಿದರು ನೀರುಕೊಡಲ್ಲ, ಯಾರೂ ಹೇಳಿದರು ನೀರುಕೊಡಲ್ಲಎಂದರು.
ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಾರೆಂದು ಬಿಜೆಪಿಯವರುಅಭ್ಯರ್ಥಿ ಬದಲಾವಣೆ ಮಾಡುತ್ತಿರಬಹುದು ನನಗೆ ಗೊತ್ತಿಲ್ಲ, ಯದುವೀರ್‍ಆಗುವುದು,ಮಾಧ್ಯಮವರು ಸೃಷ್ಟಿ ಮಾಡಿಕೊಂಡು ಹೊಂದಾಣಿಕೆರಾಜಕೀಯಎಂದರೆ ಹೇಗೆ ಎಂದುಕಿಡಿಕಾರಿದರು.
ತಾನುಎಂಪಿಯಾದರೇಸಿಎಂ ಕುರ್ಚಿಅಲುಗಾಡಲಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆ ಟಾಂಗ್ ನೀಡಿ, ಎರಡು ಸಾರಿ ಎಂಪಿ ಆಗಿದ್ದಾರಲ್ಲ ನನ್ನಕುರ್ಚಿಅಲುಗಾಡಲೇಇಲ್ಲಾ, ಕ್ಯಾಂಡಿಡೇಟ್‍ಯಾರದಾರೂ ಆಗಲಿ ನಾವು ಈ ಬಾರಿ ಬಿಜೆಪಿಯನ್ನು ಸೋಲಿಸುತ್ತೇವೆಎಂದರು.