ಜೇವರ್ಗಿ ತಾಯಿ-ಮಕ್ಕಳ ಆಸ್ಪತ್ರೆ ಲೋಕಾರ್ಪಣೆ:ಐದು ಗ್ಯಾರಂಟಿ ಎಂದು ನಿಲ್ಲುವುದಿಲ್ಲ ಎಂದು ಆರನೇ ಗ್ಯಾರಂಟಿ ನೀಡಿದ ದಿನೇಶ್ ಗುಂಡೂರಾವ್
ಕಲಬುರಗಿ:ಮಾ.12:ಜೇವರ್ಗಿ ಪಟ್ಟಣದಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ-ರಾಜ್ಯ ಸರ್ಕಾರದ 60-40 ಅನುಪಾತದ ಅನುದಾನದಿಂದ ನಿರ್ಮಿಸಲಾಗಿರುವ 100 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಅವರು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಜೇವರ್ಗಿ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಅವರ ಕ್ಷೇತ್ರದಲ್ಲಿ ಎಂ ಸಿ ಎಚ್ 100 ಹಾಸಿಗೆ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡಿದ್ದು ನನಗೆ ಸಂತೋಷ ತಂದಿದೆ. ಇದಕ್ಕೆ ಬೇಕಾದ ಎಲ್ಲಾ ಸಿಬ್ಬಂದಿ ವರ್ಗ ಶೀಘ್ರದಲ್ಲಿಯೇ ಭರ್ತಿ ಮಾಡಿಕೊಳ್ಳುತ್ತೇವೆ. ಜೊತೆಗೆ ಆಸ್ಪತ್ರೆಗೆ ಬೇಕಾದಂತ ಸಾಮಗ್ರಿಗಳು ಯಂತ್ರೋಪಕರಣಗಳು ಒದಗಿಸಲು ಪ್ರಯತ್ನ ಪಡುತ್ತೇನೆ ಎಂದು ಹೇಳಿದರು. ಕೆಕೆಆರಡಿಬಿ ಯೋಜನೆಯಲ್ಲಿ ಆರೋಗ್ಯ ಆವಿಸ್ಕಾರ ಅಕ್ಷರವಿಷ್ಕಾರದ ಯೋಜನೆ ಜಾರಿಗೆ ತಂದು ಅನೇಕ ಬಡವರಿಗೆ ಮತ್ತು ನಿರ್ಗತಿಕರಿಗೆ ಉದ್ಯೋಗ ವದಿಸುವಂತ ಕೆಲಸ ಕೆಕೆಆರ್ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಅಜಯ್ ಸಿಂಗ್ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು. ತಾಯಿ ಮಕ್ಕಳ ಆಸ್ಪತ್ರೆಯ ಸೌಲಭ್ಯವನ್ನು ಜೇವರ್ಗಿ ಮತ್ತು ಎಡ್ರಾಮಿ ಕ್ಷೇತ್ರದ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಆರೋಗ್ಯ ಮಂತ್ರಿಗಳು ವಿರೋದ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಐದು ಗ್ಯಾರಂಟಿಗಳು ನೀಡಿದ ಕಾಂಗ್ರೆಸ್ ಸರ್ಕಾರ ದಿವಾಳಿ ಆಗುತ್ತದೆ ಎಂದು ವಿರೋಧ ಪಕ್ಷ ಟೀಕೆ ಮಾಡುತ್ತಿದೆ. ಆದರೆ ನಮ್ಮ ಸರ್ಕಾರ ಐದು ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಆರನೇ ಗ್ಯಾರಂಟಿ ನಾ ನೀಡುತ್ತೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಬೇಕಾದ ಹಣ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಕೆಕೆಆರ್ ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ
ಡಾ.ಅಜಯ್ ಸಿಂಗ್ ಅವರು ಮಾತನಾಡಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸದುಪಯೋಗವನ್ನು ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಜನರು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜೇವರ್ಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲ್ಲಮಪ್ರಭು ಪಾಟೀಲ್, ದಕ್ಷಿಣ ಮತಕ್ಷೇತ್ರದ ಶಾಸಕರು ಕಲ್ಬುರ್ಗಿ, ತಿಪ್ಪಣ್ಣಪ್ಪ ಕಮಕ್ನೂರು ವಿಧಾನಪರಿಷತ್ ಸದಸ್ಯರು, ಅಫಜಲಪೂರ ಶಾಸಕರಾದ ಎಂ. ವೈ, ಪಾಟೀಲ್, ತಾಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ಶರಣಬಸವ ಗಣಜಲಕೇಡ್, ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾಧಿಕಾರಿಗಳಾದ ರತಿಕಾಂತ್ ಸ್ವಾಮಿ, ಜಗದೇವ್ ಗುತ್ತೇದಾರ್, ಗುತ್ತೇದಾರರಾದ ಸುಬ್ಬರೆಡ್ಡಿ, ರಾಜಶೇಖರ್ ಸೀರಿ, ರುಕುಂ ಪಟೇಲ್ ಇಜೇರಿ, ಸಿದ್ದಲಿಂಗ ರೆಡ್ಡಿ ಇಟಗಾ, ಅಬ್ದುಲ್ ನಬಿ, ಶೋಭಾ ಸಜ್ಜನ್, ಸುಮಂಗಲ ಹೂಗಾರ್, ಮಹಾದೇವಿ ಶಿವಸಿಂಪಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಶಿಕ್ಷಕಿಯರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.