ಚಿತ್ರ ಕಲಾಕೃತಿಗಳ ಪ್ರದರ್ಶನ ಯುವ ಕಲಾವಿದರಿಗೆ ಪ್ರೇರಣೆ:ಡಾ ವಿ.ಜಿ. ಅಂದಾನಿ
ಕಲಬುರಗಿ:ಮಾ.12: ಕಲಬುರಗಿ ಹಿರಿಯ ಚಿತ್ರಕಲಾವಿದರ ಪ್ರದರ್ಶನಗಳು ಯುವಕಲಾವಿದರಿಗೆ ಪ್ರೇರಣೆ ಹಾಹೂ ಸ್ಪೂರ್ತಿ ನೀಡುತ್ತವೆ ಎಂದು ಹಿರಿಯ ಚಿತ್ರಕಲಾವಿದ ಡಾ ವಿ.ಜಿ ಅಂದಾನಿ ಹೇಳಿದರು.
ಅವರು ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ ಗ್ಯಾಲರಿಯಲ್ಲಿ ಮಂಗಳವಾರ ಹಿರಿಯ ಚಿತ್ರಕಲಾವಿದ ನಾರಾಯಣ ಭೋಸಾವಳೆ ಅವರ 75ನೇ ಜನ್ಮ ದಿನೋತ್ಸವದ ನಿಮಿತ್ಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಾಗೂ ಧರಣಿ ಮಂಡಲದ ಚಿತ್ತಾರ ಪುಸ್ತಕ ಬಿಡುಗಡೆ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಕಲಾಪ್ರದರ್ಶನದಿಂದ ಕಲಾಕ್ಷೇತ್ರ ಬಲವರ್ಧನೆಗೊಳ್ಳುತ್ತದೆ ಎಂದರು.
ಹಿರಿಯ ಚಿತ್ರಕಲಾವಿದ ಕೆ.ಎಸ್.ಸರೋದೆ ಪ್ರದರ್ಶನ ಉದ್ಘಾಟಿಸಿ ಕಲಾಕೃತಿಗಳನ್ನು ವಿಕ್ಷೀಸಿದರು.
ಲಕ್ಷ್ಮಣರಾವ ಲೋಣಕರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನಾರಾಯಣ ಭೋಸಾವಳೆ ಅವರ ಧರಣಿ ಮಂಡಲದ ಚಿತ್ತಾರ ಪುಸ್ತಕ ಲೋರ್ಕಾಪಣೆಗೊಳಿಸಿ ಮಾತನಾಡಿದರು.
ನಾರಾಯಣ ಭೋಸಾವಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುದೀಪ ಪ್ರಾರ್ಥನಾ ಗೀತೆ ಹಾಡಿದರು. ಎಂ.ಸಂಜೀವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಬಸವರಾಜ ಉಪ್ಪಿನ, ವಿ.ಬಿ. ಬಿರಾದಾರ, ಬಸವರಾಜ ಜಾನೆ, ಡಾ ಹಣಮಂತ ಮಂತಟ್ಟಿ, ದಿ ಐಡಿಯಲ್ ಫೈನ್ ಆರ್ಟ ಕಾಲೇಜಿನ ಪ್ರಾಂಶುಪಾಲ ಕೆ.ಎಂ ಲೋಕಯ್ಯಾ ಎಂ ಎಂ.ಕೆ ಕಾಲೇಜಿನ ಪ್ರಾಂಶುಪಾಲ ಶೇಷರಾವ ಬಿರಾದಾರ, ಗೌತಮ ಅಂದಾನಿ, ಗೌರೀಶ .ಅಂದಾನಿ, ನಾರಾಯಣ .ಎಂ. ಜೋಶಿ, ಮಹ್ಮದ ಅಯ್ಯಾಜೋದ್ದಿನ ಪಟೇಲ್, ಅರವಿಂದ ಟೋಣಪೆ, ಕಿರಣ ಪಾಟೀಲ, ಭೋಸಾವಳೆ ಪರಿವಾರದವರು, ಸಕುಳ ಸಾಳಿ ಸಮಾಜದ ಮುಖಂಡರು, ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಉಪಸಿತರಿದ್ದರು.
ಚಿತ್ರಕಲಾ ಪ್ರದರ್ಶನ ಮಾರ್ಚ 14 ರವರಗೆ ಮುಂಜಾನೆ 10 ಗಂಟೆಯಿಂದ ಸಂಜೆ 6 ಗಂಟೆಯವರಗೆ ಚಿತ್ರಕಲಾವಿದರು, ಕಲಾಆಸಕ್ತರು,ಸಾರ್ವಜನಿಕರು ವೀಕ್ಷಿಸಬಹುದು