ಕರಟಕ ದಮನಕ ಚಿತ್ರ ಯಶಸ್ವಿ ಪ್ರದರ್ಶನ : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಂದ ವಿಜಯಯಾತ್ರೆ

ಸಂಜೆವಾಣಿ ವಾರ್ತೆ
ದಾವಣಗೆರೆ, ಮಾ. 11,ಕರಟಕ ದಮನಕ ಅಂದರೆ ಎರಡು ಕುತಂತ್ರಿ ನರಿಗಳ ಕಥೆಯಾಗಿದೆ. ಒಂದು ನಾನು ಇನ್ನೊಂದು ಪ್ರಭುದೇವ. ನರಿ ಬುದ್ದಿ ಇರುವಂತಹ ವ್ಯಕ್ತಿಗಳು. ಏನೂ ಸಂಬAಧವೇ ಇಲ್ಲದಂತೆ ಬೆಳೆದ ವ್ಯಕ್ತಿಗಳು ಹೇಗೆ, ಏತಕ್ಕಾಗಿ ಮನುಷ್ಯರಾಗಿ ಬದಲಾವಣೆಯಾಗುತ್ತಾರೆ. ಅವರ ಸಂಬAಧಗಳು ಹುಟ್ಟುತ್ತಾ ಹೋಗುತ್ತವೆ. ಮಾನವೀಯ ಮೌಲ್ಯಗಳು ಏನು, ನೆಲದ ಮಹಿಮೆ ಏನು ಎಂಬುದರ ಬಗ್ಗೆ ಸಿನಿಮಾ ಮೂಡಿ ಬಂದಿದೆ ಎಂದು ನಟ ಶಿವರಾಜ ಕುಮಾರ್ ಹೇಳಿದರು.ನಗರದ ತ್ರಿಶೂಲ್ ಚಿತ್ರಮಂದಿರದಲ್ಲಿ  ನಡೆದ ಕರಟಕ ದಮನಕ ಚಲನಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಚಿತ್ರ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಅಭಿಮಾನಿಗಳಿಗೆ, ಚಿತ್ರರಸಿಕರಿಗೆ ಅಭಿನಂದನೆಗಳನ್ನು ಸಲ್ಲಿಸುವ ಸಲುವಾಗಿ ಈ ವಿಜಯ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಉತ್ತರ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಆದ್ದರಿಂದ ಚಿತ್ರದುರ್ಗದಿಂದ ಹೊರಟು ದಾವಣಗೆರೆಯಿಂದ ಈ ವಿಜಯ ಯಾತ್ರೆ ಆರಂಭಿಸಿದ್ದೇವೆ ಎಂದರು.ಇದು ಈ ಭಾಗದಲ್ಲಿನ ನೀರಿನ ಸಮಸ್ಯೆ, ಅಲ್ಲದೇ ಈಗಿನ ಪೀಳಿಗೆ ತಾವು ಹುಟ್ಟಿ ಬೆಳೆದ ಊರನ್ನು ಮರೆಯುತ್ತಾರೆ. ಅದನ್ನು ಕುರಿತ ಚಿತ್ರವಾಗಿದೆ. ಜೊತೆಗೆ ಮನೋರಂಜನೆ ಸಹಾ ಈ ಚಿತ್ರದಲ್ಲಿದೆ. ಯೋಗರಾಜ ಭಟ್ಟರ ಪಯಣದಲ್ಲಿ ಒಂದು ಕಥೆ ಇರುತ್ತದೆ. ಬಹಳ ಆಸಕ್ತಿವಹಿಸಿ ಈ ಚಿತ್ರದ ಕಥೆಯನ್ನು ಬರೆದಿದ್ದಾರೆ. ಬರೀ ನೀರಿನ ಸಮಸ್ಯೆ ಬಗ್ಗೆ ಚಿತ್ರ ಮಾಡಿದರೆ ಅದು ಡಾಕುಮೆಂಟರಿ ಆಗುತ್ತದೆ. ಇದರ ಜೊತೆಗೆ ಚಿತ್ರ ಅರ್ಥವಾಗಬೇಕು. ಜನರು ಬರೀ ನೀರಿನ ಸಮಸ್ಯೆ ಇದೆ ಎಂದು ಮಾತನಾಡುತ್ತಾರೆ. ನೀರಿನ ಸಮಸ್ಯೆ ಇದೆ, ನಾವು ನಮ್ಮ ಊರಿಗೆ ಹೋಗಿ ನೋಡಿಕೊಳ್ಳಬೇಕು ಎಂಬ ಅರಿವು ಬರಲಿ ಎಂದು ನಾವು ನೀರಿನ ಸಮಸ್ಯೆ ಜೊತೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಈ ಚಿತ್ರ ಮಾಡಿದೆ ಎಂದರು.ನಾವೂ ಸಹಾ ನೀರಿನ ಬಗ್ಗೆ ಜಾಗೃತಿ ಹೊಂದಬೇಕು. ಮಳೆ ಬರುವವರೆಗೂ ನಾವು ಎಷ್ಟು ನೀರನ್ನು ಕಾಪಾಡಿಕೊಳ್ಳುತ್ತೇವೆ, ಎಷ್ಟು ನೀರನ್ನು ಉಳಿಸುತ್ತೇವೆ ಎಂಬುದು ಮುಖ್ಯ. ನಾವು ಕಾಪಾಡಿದ ನೀರು ಇನ್ನೊಬ್ಬರಿಗೆ ಅನುಕೂಲವಾಗುತ್ತದೆ. ಕೆಲವೆಡೆ ಬೋರ್‌ವೆಲ್‌ನಿಂದ ನೀರು ಜಾಸ್ತಿ ಬರಬಹುದು, ಕೆಲವೆಡೆ ನೀರು ಬರಲ್ಲ, ನಾವು ಮಾತ್ರ ನೀರನ್ನು ಉಪಯೋಗಿಸದೇ ಬೇರೊಬ್ಬರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಿನಿಮಾವನ್ನು ಬರೀ ಮನೋರಂಜನೆಗೋಸ್ಕರ ನೋಡದೇ ಅದರಲ್ಲಿರುವ ಸಾರಾಂಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಬರಬೇಕು. ಮರಗಳನ್ನು ಕಡಿಯುವುದರಿಂದ ಮಳೆಗಳು ಕಡಿಮೆ ಆಗುತ್ತಿವೆ. ಆದ್ದರಿಂದ ಗಿಡ ಬೆಳೆಸಿ, ಕಾಡು ಉಳಿಸಿ, ಪ್ರಾಣಿಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಪ್ರಕೃತಿ ಕೋಪವಾದಾಗ ಪ್ರವಾಹ ಬರಬಹುದು, ಇಲ್ಲ ಬರಗಾಲ ಬರಬಹುದು. ಈ ರೀತಿ ಪರಿಸರ ಹಾಳಾಗುತ್ತಿದೆ. ಈ ಚಿತ್ರ ಮಕ್ಕಳ ಮೇಲೂ ಸಹಾ ಪರಿಸರ ಕಾಳಜಿ ಮೂಡಿಸಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಬರ, ನೀರಿನ ಸಮಸ್ಯೆ ಕುರಿತ ಈ ಸಿನಿಮಾ ಎಲ್ಲರಲ್ಲೂ ಸಹಾ ಜಾಗೃತಿ ಮೂಡಿಸಿದೆ. ನಮ್ಮ ಭಟ್ಟರ ಸಿನಿಮಾ ಕಥೆ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಇದೆ.
ನೀರಿನ ಸಮಸ್ಯೆ, ಬರ ಕುರಿತ ಚಿತ್ರವಾಗಿರುವುದರಿಂದ ಚಿತ್ರದುರ್ಗ, ದಾವಣಗೆರೆ, ಹೊಸಪೇಟೆ, ರಾಣೆಬೆನ್ನೂರು, ಹುಬ್ಬಳ್ಳಿ, ಬೆಳಗಾಂ, ಧಾರವಾಡ ಈ ಭಾಗಗಳಲ್ಲಿ ವಿಜಯ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.ಚಿತ್ರದ ಯೋಗರಾಜ ಭಟ್ರು ಮಾತನಾಡಿ, ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ಈ ದಾವಣಗೆರೆಯಿಂದ ಈ ವಿಜಯ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಶಿವಣ್ಣನವರ ನೇತೃತ್ವದಲ್ಲಿ ನಮ್ಮ ಚಿತ್ರ ತಂಡ ವಿಜಯ ಯಾತ್ರೆ ಹಮ್ಮಿಕೊಂಡಿದೆ. ಇಡೀ ನಾಡಿ ಶಾಶ್ವತ ನೆನಪುಗಳಲ್ಲಿ ಒಂದಾಗುವAತಹ ಸಿನಿಮಾ ಇದಾಗಿದೆ. ದಾವಣಗೆರೆ ಜನ ಸಿನಿಮಾ ಕಾಪಾಡುವ ರೀತಿ ಅದ್ಭುತ, ಎಲ್ಲ ನಾಯಕರುಗಳ ಸಿನಿಮಾಗಳನ್ನೂ ಸಹಾ ಸಮ ಪ್ರೀತಿಯಿಂದ ನೋಡುವ ಊರು ಎಂದರೆ ದಾವಣಗೆರೆ.ನಾನು ಬಯಲು ಸೀಮೆಯವನು, ಶಿವಣ್ಣ ಗಾಜನೂರಿನವರು, ವಾರಕ್ಕೆ ಒಮ್ಮೆ ಹೋಗದೇ ಇದ್ದರೆ ಮನಸ್ಸಿಗೆ ಸಮಾಧಾನ ಇರಲ್ಲ. ಹೊಟ್ಟೆಪಾಡಿಗೆ ದೇಶವನ್ನೇ ಬಿಟ್ಟು ಹೋದರೂ ಸಹಾ ತಾವು ಹುಟ್ಟಿದ , ಜನ್ಮ ನೀಡಿದ ಊರು, ಆ ಊರಲ್ಲಿ ಕುಡಿದ ನೀರು, ಆ ತೇರು ಎಂದಿಗೂ ಮರೆಯಬೇಡ, ಅವು ನಿಮ್ಮ ಅಪ್ಪ ಅಮ್ಮ ಇದ್ದಂತೆ. ಅಪ್ಪ ಅಮ್ಮರನ್ನು ಮರೆಯುವುದು ಒಂದೇ ನಿಮ್ಮ ಊರನ್ನು ಮರೆಯುವುದು ಒಂದೇ. ಎಷ್ಟೋ ಜನರು ಈ ಸಿನಿಮಾದಿಂದ ಮನಃ ಪರಿವರ್ತನೆಯಾಗಿದ್ದಾರೆ. ನೀವು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ನಿಮಗೆ ಮಾಯ ಕನ್ನಡಿ ಹಿಡಿದಂತೆ ನಿಮಗೆ ನೀವೇ ಸಿಗುತ್ತೀರಿ. ದಯವಿಟ್ಟು ಈ ಚಿತ್ರವನ್ನು ಎಲ್ಲರೂ ನೋಡಿ. ಚಿತ್ರ ಎಲ್ಲರ ಮನೆಮಾತಾಗಲಿ ಎಂದರು.