ಬೆಂಕಿ ಅವಗಡದಲ್ಲಿ ಮನೆ ಭಸ್ಮ: ಪರಿಹಾರಕ್ಕೆ ಶಾಸಕರ ಸೂಚನೆ
ಚಿಂಚೋಳಿ,ಮಾ.12- ತಾಲೂಕಿನ ಹುಡದಳ್ಳಿ ಗ್ರಾಮದ ಅನೀಲ ಕುಮಾರ ಜಮಾದಾರ, ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿದ್ದ ಇದ್ದ ವಸ್ತುಗಳು ಭಸ್ಮವಾಗಿದ್ದು, ಬೆಂಕಿಯಿಂದ ಸಂಭವಿಸಿದ ಹಾನಿಯ ವಿಷಯ ತಿಳಿದು ಶಾಸಕರಾದ ಡಾ. ಅವಿನಾಶ್ ಜಾಧವ್, ಅವರು ಹುಡದಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮನೆಯ ಮಾಲೀಕರಾದ ಕೋಲಿ ಸಮಾಜದ ತಾಲೂಕ ಅಧ್ಯಕ್ಷರಾದ ಅನೀಲ ಕುಮಾರ ಜಮಾದಾರ, ಅವರು ಅವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಅವಗಡದ ಸಂಬಂಧಿಸಿದಂತೆ ಅಧಿಕಾರಿಗಳ ಕೂಡ ಪರಿಶೀಲನೆ ಮಾಡಿ ಸರ್ಕಾರದಿಂದ ಪರಿಹಾರವನ್ನು ಆದಷ್ಟು ಬೇಗನೆ ನೀಡುತ್ತಾರೆ ಎಂದು ಅವರು ಹೇಳಿದರು.
ಬಿಜೆಪಿ ಪಕ್ಷದ ಮುಖಂಡರಾದ ಅಲ್ಲಮಪ್ರಭು ಪಾಟೀಲ್ ಹುಲಿ, ಮಲ್ಲು ಚುಮ್ಮಾಚೋಡ್, ಮತ್ತು ಅನೇಕ ಬಿಜೆಪಿ ಪಕ್ಷ ಮುಖಂಡರು ಇದ್ದರು