ಹಾಳು ಕೊಂಪೆಯಂತಾದ ಹಳ್ಳಿಖೇಡ (ಬಿ) ಪಶು ಆಸ್ಪತ್ರೆ
ಶಿವಶರಣ ಚಾಂಗಲೇರಿ
ಹುಮನಾಬಾದ್ :ಮಾ.12: ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಪಶು ಆಸ್ಪತ್ರೆ ಸುತ್ತಲೂ ಗಿಡ ಗಂಟಿ ಬೆಳೆದು ಸಾರ್ವಜನಿಕರ ಹಾಗೂ ಜಾನುವಾರುಗಳ ಉಪಯೋಗಕ್ಕೆ ಬಾರದೇ ಹಾಳು ಕೊಂಪೆಯಾಗಿದೆ.
ಜಾನುವಾರುಗಳ ಆರೋಗ್ಯ ಹಿತಾದೃಷ್ಠಿಯಿಂದ ಈ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಈ ಪಶು ಆಸ್ಪತ್ರೆ ಸುತ್ತಲೂ ಗಿಡ ಗಂಟಿ ಬೆಳೆದು ಜನರು ಓಡಾಲು ಬರದಂತಾಗಿದೆ. ಸರಕಾರ ಒಟ್ಟು 42 ಲಕ್ಷ ರೂಪಾಯಿ ಅನುದಾನ ಖರ್ಚು ಮಾಡಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿದರು ಕೆಲಸಕ್ಕೆ ಬಾರದೇ ಇರುವುದು ವಿರ್ಪಯಾಸವೇ ಸರಿ.
ಅಲ್ಲಿನ ವೈದ್ಯರು ನೂತನ ಆಸ್ಪತ್ರೆಗೆ ಜನರು ಜಾನುವಾರುಗಳನ್ನು ತರುತ್ತಿಲ್ಲ ಎಂದು ಕುಂಟು ನೆಪ ಹೇಳಿಕೊಂಡು ಆಸ್ಪತ್ರೆ ಸ್ಥಳಾಂತರ ಮಾಡದೇ ಹಳೆಯ ಪಶು ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಸರಕಾರದ ಅನುದಾನ ಹಳ್ಳದಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತಿದ್ದೆ ಎನ್ನುವುದು ಇಲ್ಲಿನ ಸ್ಥಳೀಯರ ಗಂಭೀರ ಆರೋಪವಾಗಿದೆ.
ಹಳ್ಳಿಖೇಡ (ಬಿ) ಪಟ್ಟಣದ ನೂತನ ಪಶು ಆಸ್ಪತ್ರೆಗೆ ಭೇಟಿ ಅಲ್ಲಿನ ವೈದ್ಯಾಧಿಕಾರಿಯೊಂದಿ ಚರ್ಚಿಸಿದ್ದೇನೆ. ಈ ಸಂದರ್ಭದಲ್ಲಿ ಜನರು ತಮ್ಮ ಜಾನುವಾರುಗಳನ್ನು ತರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಕೇವಲ ಒಂದು ವಾರದಲ್ಲಿ ನೂತನ ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುವುದು.
ಡಾ. ಗೋವಿಂದ
ತಾಲೂಕ ವೈದ್ಯಾಧಿಕಾರಿ, ಪಶು ಸಂಗೋಪನ ಇಲಾಖೆ ಹುಮನಾಬಾದ್