ಹೊಸ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮ
ಕಲಬುರಗಿ,ಮಾ 12:ನಗರದ ಪಿಡಿಎ ಇಂಜನಿಯರಿಂಗ್ ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಮುಖ್ಯ ಅತಿಥಿ ಕೆ.ಎಸ್.ಆರ್ ಪೆÇಲೀಸ್ ಕಮಾಡೆಂಟ ಬಸವರಾಜ ಜಿಲ್ಲೆ ಅವರು ಮಾತನಾಡಿ,ಶಿಕ್ಷಣದ ನಂತರದಲ್ಲಿ ಮುಂದೆ ಏನು ಅನುವ ವಿಷಯದ ಕುರಿತು ವಿವರಿಸಿದರು. ಇದು ಭಾರತದ 10 ಉನ್ನತ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ.ಪೆÇಲೀಸ್ ವಿಭಾಗದಲ್ಲಿ(ಡಿ. ಅರ್. ಡಿ. ಓ) ಕೂಡ ಇಂಜಿನಿಯರಗಳು ಬೇಕು. ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ತಂತ್ರಜ್ಞಾನದ ಅವಶ್ಯಕತೆ ಇದೆ ಎಂದರು.ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಆರ್.ಮಿಸೆ ಅವರು ವಿದ್ಯಾರ್ಥಿಗಳಿಗೆ ಪಠ್ಯಪಠ್ಯೇತರ ವಿಷಯಗಳ ಕುರಿತು ವಿವರಿಸಿದರು ಪ್ರಥಮ ವರ್ಷದ ಕೋಆರ್ಡಿನೆಟರ ಡಾ. ಉದಯ ಬಳಗಾರ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.ಹೊಸ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮದ ಸಂಯೋಜಕ ಜಯಪ್ರಕಾಶ ಹೊಸ ವಿಷಯಗಳ ಕುರಿತು ತಿಳಿಸಿದರು.ಡಾ.ಸುಜಾತಾ ಪಾಟೀಲ ವಂದಿಸಿದರು.ಉಪಪ್ರಾಚಾರ್ಯ ಡಾ.ಎಸ್.ಆರ್. ಹೊಟ್ಟಿ , ಡಾ. ಶ್ರೀದೇವಿ ಸೋಮಾ ಮತ್ತು ಸಂಯೋಜಕ ಪೆÇ್ರ.ಜಯಪ್ರಕಾಶ ಹಾಗೂ ಪೆÇ್ರ.ಉದಯ ಬಳಗಾರ ಉಪಸ್ಥಿತರಿದ್ದರು.