ಅಪಘಾತ ಪ್ರಕರಣ: 2 ವರ್ಷ ಜೈಲು
ಕಲಬುರಗಿ,ಮಾ.12: ಇಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆದು ಸಾವಿಗೆ ಕಾರಣವಾದ ಆರೋಪ ಸಾಬೀತಾದ್ದರಿಂದ ಅಪರಾಧಿಗೆ 2 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಲಾಗಿದೆ.ಭಗವಂತರಾವ ಕುಲಕರ್ಣಿ ಶಿಕ್ಷೆಗೊಳಗಾದ ವ್ಯಕ್ತಿ.2021 ರ ನವೆಂಬರ್ 19 ರಂದು ಕೂಡಿ ಗ್ರಾಮದ ಸಮೀಪದಲ್ಲಿ ಶಿವಶರಣಪ್ಪ ಮತ್ತು ಗುಂಡಮ್ಮ ಎಂಬುವರು ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗ ಅಲಕ್ಷ್ಯದಿಂದ ಕಾರು ಚಲಾಯಿಸಿ ಆದ ಡಿಕ್ಕಿಯಿಂದ ಶಿವಶರಣಪ್ಪ ಮತ್ತು ಗುಂಡಮ್ಮ ಮೃತಪಟ್ಟಿದ್ದರು.
ಈ ಕುರಿತು ಸಂಚಾರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು.ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಸುಶಾಂತ ಚೌಗಲೆ ಅವರು ವಿವಿಧ ಕಲಂ ಅಡಿ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಅವರು ವಾದ ಮಂಡಿಸಿದ್ದರು.