15 ರಂದು ಅಬ್ಬೆತುಮಕೂರ ರಥೋತ್ಸವ
ಕಲಬುರಗಿ,ಮಾ.12: ಯಾದಗಿರಿ ಜಿಲ್ಲೆ ಅಬ್ಬೆ ತುಮಕೂರಿನಲ್ಲಿ ಸಿದ್ಧಿ ಪುರುಷವಿಶ್ವರಾಧ್ಯರ 70 ನೆಯ ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 15 ರಂದು ಸಾಯಂಕಾಲ 6:30ಕ್ಕೆ ರಥೋತ್ಸವ ಜರಗಲಿದೆ.
ಮಾ. 4 ರಿಂದ ಆರಂಭವಾದ ಸಿದ್ಧಿಪುರುಷ ವಿಶ್ವರಾಧ್ಯರ ಪುರಾಣ ಮಾ.14 ರಂದು ಮಹಾಮಂಗಲಗೊಳ್ಳುವದು.
ಶ್ರೀ ಕ್ಷೇತ್ರ ಅಬ್ಬೆತುಮಕೂರ ಸಿದ್ದಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾಮಹೋತ್ಸವದ ಸಿದ್ದತೆಗಳು ಭರದಿಂದ ಸಾಗಿವೆ.ಜಾತ್ರಾ ಮಹೋತ್ಸವಕ್ಕೆ ಹರಗುರುಚರಮೂರ್ತಿಗಳು,ರಾಜಕೀಯ ಧುರೀಣರು,ಗಣ್ಯರು ,ಕಲಾವಿದರು ,ಸೇರಿದಂತೆ ಸಹಸ್ರಾರು ಭಕ್ತರು ಆಗಮಿಸುವರು ಎಂದು ಕಲಬುರಗಿ ಶ್ರೀ ವಿಶ್ವಾರಾಧ್ಯ ಸೇವಾ ಸಮಿತಿಯ ವಕ್ತಾರ ಹಾಗೂ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬುಲಗೆ ತಿಳಿಸಿದ್ದಾರೆ.