ಅಮರೇಶ್ವರ ಜಾತ್ರಾ ಭಜ್ಜಿ-ರೊಟ್ಟಿ ಸವಿದ ಭಕ್ತರು
ಔರಾದ :ಮಾ.12: ಪಟ್ಟಣದ ಐತಿಹಾಸಿಕ ಸುಪ್ರಸಿದ್ಧ ಶ್ರೀ ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷ ಮಹಾಶಿವರಾತ್ರಿಯ ಸಂಧರ್ಭದಲ್ಲಿ ಸತತ ಒಂದು ವಾರಗಳ ಕಾಲ ಜರುಗುತ್ತದೆ.
ಸುಕ್ಷೇತ್ರ ಅಮರವಾಡಿಯು ಗಡಿಭಾಗದಲ್ಲಿರುವದರಿಂದ ಆಂಧ್ರ,ತೆಲಂಗಾಣ, ಮಹಾರಾಷ್ಟ್ರದ ಭಕ್ತರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅಮರೇಶ್ವರ ದರ್ಶನ ಪಡೆಯಲು ಆಗಮಿಸುತ್ತಾರೆ. ರಥೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ವಿವಿಧ ಮುಖ್ಯ ರಸ್ತೆಗಳಲ್ಲಿ ಅನ್ನ ದಾಸೋಹ ನಡೆಯುತ್ತದೆ. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ರಥೋತ್ಸವ ದಿನದಂದು ಸಂಗಮೇಶ ಚಿದ್ರೆ ಹಾಗೂ ಗೆಳೆಯರ ಬಳಗದ ವತಿಯಿಂದ ಭಜ್ಜಿ- ರೊಟ್ಟಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಭಜ್ಜಿ ರೊಟ್ಟಿ ಸವಿದರು.
ಬೇರೆ-ಬೇರೆ ಕಡೆ ಉದ್ಯೋಗ ಮಾಡುವ ಸ್ನೇಹಿತರು ಪ್ರತಿವರ್ಷ ತಪ್ಪದೇ ಅಮರೇಶ್ವರ ಜಾತ್ರೆಗೆ ಆಗಮಿಸಿ ದಾಸೋಹ ಮಾಡಿಸಿ ಸ್ವತಃ ಮುಂದೆ ನಿಂತು ಜಾತ್ರೆಗೆ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡುತ್ತಾರೆ. ನಿರಂತರವಾಗಿ ಮೂರು ವರ್ಷಗಳಿಂದ ಯುವಕರು ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ.
ಸಂಗಮೇಶ ಚಿದ್ರೆ, ಮುಖೇಶ ಪಾಟೀಲ್, ಬಸವ ಘಾಳೆ, ಮಾರುತಿ ಚಿಟಗೀರೆ, ಮಾರುತಿ ರೆಡ್ಡಿ, ಸತೀಶ ಕೊರೆ, ಬಸವರಾಜ ಟೊಳ್ಳೆ, ರಾಜೇಶ ನೀಲಾ,ಅಮರ ಹೇಡೆ, ಶಿವಾನಂದ ಪಾಟೀಲ್,ಸಾಗರ ಪಾರಾ,ಸಚಿನರೆಡ್ಡಿ,ಶಿವಾನಂದ ಸ್ವಾಮಿ, ಮನೋಜ ಕೋಳಿ,ವಿರೇಶ ಮೊರ್ಗೆ, ಮಹೇಶ ಸೊರಳ್ಳೆ ಸೇರಿದಂತೆ ಇನ್ನಿತರರಿದ್ದರು.
ನಾನಾ ಕಡೆ ಉದ್ಯೋಗದಲ್ಲಿ ತೊಡಗಿರುವ ಎಲ್ಲ ಸ್ನೇಹಿತರು ಜಾತ್ರಾ ಸಂಧರ್ಭದಲ್ಲಿ ಒಂದುಗೂಡಿ ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ತನ್ನದೇ ಆದ ಕಿರು ಸೇವೆ ಮಾಡುತ್ತಾ ಬರುತ್ತಿದ್ದೇವೆ, ಆರಾಧ್ಯದೈವ ಅಮರೇಶ್ವರರು ಇನ್ನು ಹೆಚ್ಚಿನ ಸೇವೆ ಮಾಡುವ ಶಕ್ತಿ ನೀಡಲಿ ಮುಂದಿನ ವರ್ಷವೂ ಸಹ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ದಾಸೋಹ ಕೈಗೊಳ್ಳುವ ಶಕ್ತಿ ನೀಡಲಿ.
ಸಂಗಮೇಶ ಚಿದ್ರೆ.