ಶಿವಶರಣ ಮಾದರ ಚೆನ್ನಯ್ಯ 6ನೆ ಜ್ಯೋತಿ ರಥಯಾತ್ರೆಗೆ ಚಾಲನೆ
ಬಸವಕಲ್ಯಾಣ:ಮಾ.12: ಮಾದರ ಚನ್ನಯ್ಯ ಜನಜಾಗೃತಿ ರಾಜ್ಯ ಸಮಿತಿಯಿಂದ ಕಾಯಕಪ್ರಿಯ ಶಿವಶರಣ ಮಾದರ ಚೆನ್ನಯ್ಯನವರ 6ನೇ ಜ್ಯೋತಿರಥ ಯಾತ್ರೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಭಾನುವಾರ ಶ್ರೀ ಕಾಂತ ಸ್ವಾಮೀಜಿ ಚಾಲನೆ ನೀಡದರು.
ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಶ್ರೀಶೈಲ್ ಎಂ.ಜಿ.ಸೇಡಂ ಮಾತನಾಡಿ, ಮಾದಿಗ ಸಮುದಾಯ ಆರ್ಥಿಕ, ಶೈಕ್ಷಣಿಕ, ಹಾಗೂ ರಾಜಕೀಯವಾಗಿ ಹಿಂದುಳಿದಿದೆ.. ಅನೇಕ ಸೌಲಭ್ಯಗಳಿಂದ ನಮ್ಮ ಜನ ವಂಚಿತರಾಗಿದ್ದಾರೆ, ಜನರು ಜಾಗೃತರಾಗಿ ಪ್ರತಿಯೊಬ್ಬರು ಪ್ರಶ್ನೆ ಮಾಡುವಂತಾಗಬೇಕು, ನಮ್ಮ ಹಕ್ಕು ನಾವು ಪಡೆಯುವಂತಾಗಬೇಕು. ಇದಕ್ಕಾಗಿ ಸಮುದಾಯದ ಜನ ಜಾಗೃತರಾಗವುದು ಅವಶ್ಯಕವಾಗಿದೆ ಎಂದರು.
ಮಾದಿಗರಿಗೆ ಒಳ ಮೀಸಲಾತಿ ನೀಡಬೇಕೆಂಬ ದಶಕಗಳ ಕನಸು ಈಡೇರಬೇಕಿದೆ. ನಾವು ಚುನಾವಣೆಯಲ್ಲಿ ಕೇವಲ ಮತ ಹಾಕುವುದಕ್ಕೆ ಮಾತ್ರ ಸೀಮಿತ ರಲ್ಲ ನಮ್ಮ ಹಕ್ಕು ನಾವು ಪಡೆಬೇಕಿದೆ ಜನ ಜಾಗೃತರ ಆಗಬೇಕಿದ್ದು, ಜನರಲ್ಲಿ ಜಾಗೃತಿ ಮೂಡಿಸುವದೇ ಯಾತ್ರೆಯ ಉದ್ದೇಶವಾಗಿದದದೆ ಎಂದು ಹೇಳಿದರು.
ಪೂಜ್ಯ ಚಿತ್ರಮ್ಮತಾಯಿ, ಆದಿ ಜಾಂಬವ ಮಾದಿಗ ಸಮಾಜ ಸಂಘದ ತಾಲೂಕು ಅಧ್ಯಕ್ಷ ಯುವರಾಜ ಭೆಂಡೆ, ಮುಖಂಡರಾದ ದಿಲೀಪ್ ಶಿಂಧೆ, ಯುವ ಮುಖಂಡ ಶಿವಕುಮಾರ ಬಿರಾದಾರ, ನಗರಸಭೆ ಮಾಜಿ ಸದಸ್ಯ ರವಿ ಕೊಳಕೂರ್ ಮಾತನಾಡಿದರು.
ಪ್ರಮುಖರಾದ ಪಿಂಟು ಕಾಂಬಳೆ, ದತ್ತು ಭೆಂಡೆ, ಪ್ರದೀಪ್ ಢಗಳೆ, ಗುರು ಭೆಂಡೆ, ದತ್ತಾತ್ರಿ ಧೂರೆ, ಅಶೋಕ ಢಗಳೆ, ಅಜಿತ್ ಸೂರ್ಯವಂಶಿ, ನಿಲೇಶ ಖೂಬಾ, ಪ್ರಶಾಂತ ಸಿಂಧೆ, ಅರುಣ ಗಾಯಕವಾಡ, ರವಿ ಜಾಧವ್, ಆಕಾಶ, ಸಚಿನ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.