ವಿವಿಧ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ: ಶಾಸಕ ಪಾಟೀಲ್
ಹುಮನಾಬಾದ್ :ಮಾ.12: ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಅಭಿ ವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಡಾ.ಸಿದ್ದು ಪಾಟೀಲ್ ಹೇಳಿದರು.
ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ತ್ರಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ದ ಮಂಡಳಿಯ ವತಿಯಿಂದ 2023-24ನೇ ಲೆ ಸಾಲಿನ ಮೈಕ್ರೋ ಯೋಜನೆಯಡಿ ಥ ಸೋಮವಾರ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ ದರು.ಹಳ್ಳಿಗಳ ಅಭಿವೃ ದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂ ಡಳಿಯ ಅನುದಾನ ವೆಚ್ಚ ಮಾಡ ಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಗುಣ ಮಟ್ಟದಿಂದ ಕೂಡಿರಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಳೆದ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗೆ ‘ ತಕ್ಕಂತೆ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಜತೆಗೆ ಅಭಿವೃದ್ಧಿ ಕಾರ್ಯಕ್ರಮ ಮಾಡಬೇಕು. ಕಾಮಗಾರಿ ಕೈಗೊಳ್ಳುವ ವೇಳೆ ಕಳಪೆ ಕಂಡು ಬಂದಲ್ಲಿ ಸಂಬಂಧಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ತಾಲೂಕಿನ ರಾಜ್ಯ ಹೆದ್ದಾರಿ 75ರ ಭಾಲ್ಕಿ -ಚಿಂಚೋಳಿ ಮಾರ್ಗ ಮಧ್ಯೆ ಸೇತುವೆ ನಿರ್ಮಾಣ ದುಬಲಗುಂಡಿ ಬಸವೇಶ್ವರ ವೃತ್ತದವರೆಗೆ 2 ಕೋಟಿ ರೂ .ದುಬಲಗುಂಡಿ ಗ್ರಾಮದಲ್ಲಿ ಸೋಲಾರ್ ಹೈಮಾಸ್ ಅಳವಡಿಕೆಗೆ 30 ಲಕ್ಷ ರೂ. ವಚದಲ್ಲಿ ಕಾಮಗಾರಿ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ ರಘುನಾಥ , ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಭೋಜಗುಂಡಿ, ಉಪಾಧ್ಯಕ್ಷ ಅರುಣಾದೇವಿ ಸಜ್ಜನ, ಗ್ರಾಪಂ ಸದಸ್ಯರಾದ ಶ್ರೀರಂಗ ಭೋಲಾ, ಪ್ರಭು ನೇಳಗ, ಜಯರಾಮ ಖಜೂರೆ, ಸತೀಷ ರತ್ನಾಕರ್, ಅನಿಲ್ , ಮುಖಂಡರಾದ ಸಂತೋಷ ಪಾಟೀಲ್, ಕಣಜ, ಶಾಂತಪ್ಪ ಪಸಾರ್ಗಿ, ವೈಜನಾಥ ಭೋಜ ಇದ್ದರು.