ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು
ಬೀದರ್:ಮಾ.12: ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದು ಎಂದು ಯಾದಗಿರಿಯ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಖ್ವಾಜಾ ಖಲೀಲ್ ನುಡಿದರು.
ನಿರಂಜನ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಸ್ಪರ್ಧಾಗುರು ಐಎಎಸ್ ಮತ್ತು ಕೆಎಎಸ್ ಸ್ಟಡಿ ಸೆಂಟರ್ ವತಿಯಿಂದ ನಗರದ ಬಸವ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗ್ರಾಮ ಆಡಳಿತ ಅಧಿಕಾರಿ, ಭೂ ಮಾಪಕ, ಟಿಇಟಿ, ಕೆ.ಎ.ಎಸ್. ಮತ್ತಿತರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಉಚಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಭ್ಯರ್ಥಿಗಳು ಪಠ್ಯಕ್ರಮ ಆಧರಿಸಿ ಯೋಜನಾ ಬದ್ಧವಾಗಿ ಸಿದ್ಧತೆ ನಡೆಸಬೇಕು ಎಂದು ತಿಳಿಸಿದರು.
2023 ರ ಟಿಇಟಿಯಲ್ಲಿ ತೇರ್ಗಡೆಯಾದ ಹಾಗೂ ವಿವಿಧ ಹುದ್ದೆಗಳಿಗೆ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು.
ಸಹಾಯಕ ಪ್ರಾಧ್ಯಾಪಕ ಡಾ. ಶರಣಪ್ಪ ಎಸ್. ಮಲಗೊಂಡ, ಉಪನ್ಯಾಸಕಿ ವೀಣಾ ಜಲಾದೆ, ಪ್ರಾಚಾರ್ಯ ರಾಮಲಿಂಗ ಭಾತಂಬ್ರಾ, ಮುಖಂಡ ಶ್ರೀಕಾಂತ ಸ್ವಾಮಿ, ಟ್ರಸ್ಟ್ ನಿರ್ದೇಶಕ ಅಮಿತ್ ಸೋಲಪುರ, ಸಂಚಾಲಕ ರಮೇಶ ಮರ್ಜಾಪುರ, ಜಗನ್ನಾಥ ಶಿವಗೊಂಡ, ಸಾಗರ ಮೇತ್ರೆ, ನಾಗನಾಥ ಬಿರಾದಾರ, ಆರೀಫ್‍ಮಿಯ, ಹುಸೇನ್, ವಿಷ್ಣು ಇದ್ದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳಿಗೆ 100 ಅಂಕಗಳ ಮಾದರಿ ಪರೀಕ್ಷೆ ಸಹ ನಡೆಸಲಾಯಿತು.