ಪ್ರತಿ ಜೀವಿಗೂ ನಯನ ಎಷ್ಟು ಮುಖ್ಯವೋ, ಜಲವು ಅಷ್ಟೇ ಮುಖ್ಯ
ಗುರುಮಠಕಲ್:ಮಾ.12: ನೀರಿದ್ದರೆ ನಾವು ನೀವು, ಹನಿ ಹನಿ ಉಳಿಸಿ ಅಂತರ ಜಲ ಹೆಚ್ಚಿಸಿ ಅನ್ನುವ ಹಾಗೆ ಹರಿಯುತ್ತಿರುವ ನೀರನ್ನು ನಾವು ಸಾಧ್ಯವಾದಷ್ಟು ಭೂಮಿಯಲ್ಲಿ ಇಂಗಿಸುವ ದರಿದಿಂದ ಅಂತರ್ ಜಲಮಟ್ಟ ಹೆಚ್ಚಾಗುತ್ತದೆ ಇದರಿಂದ ಕೊಳವೆ ಬಾವಿಗಳಲ್ಲಿ ಇನ್ನಷ್ಟು ನೀರು ಹೆಚ್ಚಾಗಿ ಬೇಸಿಗೆಯಲ್ಲಿ ಕುಡಿಯಲು ನೀರು ಸಾರ್ವಜನಿಕರಿಗು ಮತ್ತು ಅರಣ್ಯದಲ್ಲಿ ಗಿಡ ಗಂಟಿಗಳಿಗು ಮತ್ತು ಪಶು ಪಕ್ಷಿ ಗಳಿಗೂ ಕುಡಿಯಲು ನೀರು ಸಿಗುತ್ತವೆ ಎಂದು ಹೇಳಿದರು. ತಾಲೂಕಿನ ಚೆಪೆಟ್ಲಾ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಕಲಿಕ ಟಾಟಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನೀರು ನೈರ್ಮಲ್ಯ ಮತ್ತು ಶುಚಿತ್ವ ವಿಶೇಷ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಅವರು ಮಾತನಾಡಿ ಜಲಾನಯನ ಸಮಿತಿಯ ಈ ಸಭೆಯಲ್ಲಿ ಗ್ರಾಮ ಸಭೆಯ ಗುರಿ, ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
ಇಂತಹ ಕಾರ್ಯಗಳು ಯಶಸ್ವಿ ಯಾಗಿ ಬೇಕಾದರೆ ಜನರ ಸಹಕಾರ ಬಹಾಳ ಮುಖ್ಯವಾದದ್ದು ಎಂದರು. ಕಲಿಕಾ ಟಾಟಾ ಟ್ರಸ್ಟ್ ಸಾಮಾಜಿಕ ಸಂಚಲನ ಕಾರ ದೇವಿಂದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು.ಈ ವೇಳೆ ಕಲಿಕಾ ಟಾಟಾ ಟ್ರಸ್ಟ್ ಸಾಮಾಜಿಕ ಸಂಚಲನ ಕಾರ ದೇವಿಂದ್ರಪ್ಪ. ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಮ್ಮ. ಸಿದ್ದಪ್ಪ ಬಡಿಗೇರ,ನರಸಿಂಹ ರೆಡ್ಡಿ ,ಗಿರಪ್ಪ, ಕಾಶಪ್ಪ, ಶ್ರೀ ಶೈಲ, ಮಾಣಿಕ್ಯಮ್ಮ, ಜ್ಯೋತಿ ಮಹೇಶ್, ಮಹಾದೇವಪ್ಪ, ಮಾಳಮ್ಮ, ಅಂಜಪ್ಪ, ಭೀಮರಾಯ, ಮಲ್ಲಿಕಾರ್ಜುನಪ್ಪ, ಬಸಪ್ಪ, ಮಲ್ಲಪ್ಪ, ಅನಂತಯ್ಯ, ಬೀಮಪ್ಪ, ನರಸಪ್ಪ, ತಿಪ್ಪಣ್ಣ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸಾರ್ವಜನಿಕರು ಇದ್ದರು.