ಮಡಿವಾಳೇಶ್ವರರ 106 ನೇ ಜಾತ್ರಾ ಮಹೋತ್ಸವ
ಚಿಟಗುಪ್ಪ:ಮಾ.12:ಪಟ್ಟಣದ ಸಂತ ಶಿರೋಮಣಿ ಮಡಿವಾಳೇಶ್ವರರ 106 ನೇ ಜಾತ್ರಾ ಮಹೋತ್ಸವಕ್ಕೆ ಚಿಟುಗುಪ್ಪ ದ ಅಯ್ಯಪ್ಪ ಸ್ವಾಮಿ ಹಿರೇಮಠದ ಗುರುಲಿಂಗ ಶಿವಾಚಾರ್ಯರ ದಿವ್ಯಸಾನಿದ್ಯದಲ್ಲಿ ಮರುಳಾರಾಧ್ಯ ಶಿವಾಚಾರ್ಯರ ಉಪಸ್ಥಿತಿಯಲ್ಲಿ ಮೆರವಣಿಗೆ ಪ್ರಾರಂಭವಾಗಿ ಕುನಬಿವಾಡದ ಹನುಮನ ಮಂದಿರವರೆಗೆ ಜರುಗಿದೆ.
ಈ ಮೆರವಣಿಗೆಯಲ್ಲಿ ಭಜನಾ ಮಂಡಳಿ, ಪಲ್ಲಕ್ಕಿ ಮೆರವಣಿಗೆ, ಡೊಳ್ಳು ಕುಣಿತ, ಗುರುಗಳ ರಥ ದೊಂದಿಗೆ, ಅನೇಕ ತಂಡಗಳು ಭಾಗವಹಿಸಿದವು ಸಾಯಂಕಾಲ 11ಗಂಟೆಗೆ ರಥೋತ್ಸವ ಜರುಗಲಿದೆ ನಂತರ ಸುಂದರ ಸಾಮಾಜಿಕ ನಾಟಕ ಕೂಡ ಜರುಗಲಿದೆ.