ದಾರಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ತಹಶೀಲ್ದಾರಗೆ ಮನವಿ
ಬಸವನಬಾಗೇವಾಡಿ:ಮಾ.12: ತಾಲೂಕಿನ ಉಕ್ಕಲಿ ಗ್ರಾಮದಿಂದ ಹೊನ್ನುಟಗಿ ಗ್ರಾಮಕ್ಕೆ ಬರುವ ರೈತರ ಜಮೀನುಗಳ ದಾರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಸೋಮವಾರ ಉಕ್ಕಲಿ ಗ್ರಾಮದ ರೈತರು ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಬದಲ್ಲಿ ಕರವೇ ಜಿಲ್ಲಾ ಯುವ ಘಟಕ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ ಉಕ್ಕಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಸ,ನಂ 980, ಅಪ್ಪಾಸಾಹೇಬ ಕಲಗೊಂಡ ಎಂಭ ರೈತ ಜಮೀನಿಗೆ ಹೊಂದಿಕೊಂಡಿರುವ ರಸ್ತೆಯನ್ನು ಸುಮಾರು 30-40 ವರ್ಷ ರೈತರು ಉಕ್ಕಲಿಯಿಂದ ಹೊನ್ನುಟಗಿ ಚಾಲ್ತಿಯಲ್ಲಿರುವ ರಸ್ತೆ ರಸ್ತೆ ಸರಕಾರಿ ರಸ್ತೆಯಾಗಿರುತ್ತದೆ ಸರ್ಕಾರಿ ಆದರೆ ಅಪ್ಪಾಸಾಹೇಬ ಕಲಗೊಂಡ ಎಂಭ ರೈತ ರಸ್ತೆಯಲ್ಲಿ ಆಳವಾಗಿ ಗುಂಡಿ ತೋಡಿ ಮುಂದೆ ಸಾಗುವ ರಸ್ತೆಯನ್ನ ಸ್ಥಗಿತಗೊಳಿಸಿರುತ್ತಾನೆ, ಇದರಿಂದ ರೈತರು ಜಮೀನುಗಳಿಗೆ ಸಂಚರಿಸಲು ಪರದಾಡುವಂತಾಗಿದೆ ಕೂಡಲೇ ಸಂಭಂದಿಸಿದ ಅಧಿಕಾರಿಗಳು ರಸ್ತೆಯನ್ನು ಸರ್ವೇ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಇಲ್ಲವಾದರೇ ಕರವೇ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ನೀಲಪ್ಪ ಮಸಳಿ, ಚಂದ್ರಶೇಖರ ಮಸಳಿ, ಗೌಡಪ್ಪ ಒಜಿ, ಬಾಬಾಆಹೇಬ ಮಸಳಿ, ಬಿ,ಎಸ್ ತೆಲಸಂಗ, ಎಸ್ ಎನ್ ಇಚಿಡಿ, ಎನ್ ಎಸ್ ಮದ್ದರಿಮಠ, ವಿ, ಬಿ ಕುಲಕರ್ಣಿ ಸೇರಿದಂತೆ ಮುಂತದವರು ಇದ್ದರು.