ಬಿಗಬಾಸ್ ಸ್ಪರ್ಧಿ ಮಾಶೆಟ್ಟೆಗೆ ಅದ್ದೂರಿ ಸನ್ಮಾನ
ಬೀದರ್:ಮಾ.12: ನಟ ಸಲ್ಮಾನಖಾನ್ ನಡೆಸಿಕೊಡುವ ಬಿಗಬಾಸ್ ಸೀಸನ್ 17ರ ಸ್ಪರ್ಧಿ, ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ ನಿವಾಸಿ ಅರುಣ ಬಾಬುರಾವ ಮಶೆಟ್ಟಿ ಅವರನ್ನು ಭಾನುವಾರ ನಗರದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಅಭಿಮಾನಿಗಳ ಬಳಗದ ವತಿಯಿಂದ ಇಲ್ಲಿನ ಸಿದ್ಧಾರೂಢ ಗುಂಪಾ ರಸ್ತೆಯ ಬೆಲ್ದಾಳೆ ಪೆಟ್ರೋಲ್ ಪಂಪ್ ಹತ್ತಿರದ ಆರ್.ಎಸ್. ಮೈದಾನದಲ್ಲಿ ರಾತ್ರಿ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಬಿಗಪಾಸ್ ಸ್ಪರ್ಧಿಸಿದ ನಂತರ ಮೊದಲ ಬಾರಿಗೆ ತವರು ಜಿಲ್ಲೆಗೆ ಮಾಶೆಟ್ಟಿ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಜನರು ಆಗಮಿಸಿದ್ದರು. ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಶೆಟ್ಟೆ, ತವರಿನ ಸನ್ಮಾನ ಎಲ್ಲ ಸನ್ಮಾನಕ್ಕಿಂತ ಮುಖ್ಯ. ನಟ ಸಲ್ಮಾನಖಾನ್ ನಡೆಸಿಕೊಂಡುವ ಹಿಂದಿ ಬಿಗಬಾಸ್‍ನಲ್ಲಿ ನಾನು ಸ್ಪರ್ಧಿಸಿ ಅಂತಿಮ ಹಂತದ ವರೆಗೆ ಹೋಗಿದ್ದು ಬಹಳ ಖುಷಿ ತಂದಿದೆ. ಇದೇ ಮೊದಲ ಬಾರಿಗೆ ಬೀದರನಿಂದ ನಾನು ಸ್ಪರ್ಧಿಸಿದ್ದು ಖುಷಿ ತಂದಿದೆ ಎಂದು ಹೇಳಿದರು.
ಆಯೋಜಕ ಮಲಿಕನಾಥ ಮಡಿಗೆ, ವೀರಶೆಟ್ಟಿ ಪಾಟೀಲ್ ನೌಬಾದ್, ಮಹೇಶ ಮೈಲಾರೆ, ಶ್ರೀನಿವಾಸರಡ್ಡಿ, ಮಹೇಶ ಖೇಣಿ, ನಾಗರಾಜ ಜೋಗಿ, ಪವನ್ ಉಂಡೆ, ಹಣ್ಮು ಪಾಜಿ, ಪಿಲಿಪ್, ರಾಹುಲ್, ಜ್ವಾಯ್, ಸೋನು ಮೊದಲಾದವರು ಇದ್ದರು.
ಮೂಲತಃ ಯೂಟ್ಯೂಬರ್ ಆಗಿರುವ ಅರುಣ 17ರ ಫಿನಾಲೆಯಲ್ಲಿ ಅಂತಿಮ ಐದು ಜನರಲ್ಲಿ ಒಬ್ಬರಾಗಿದ್ದರು.