ಗುರು ನಾನಕ ಪಬ್ಲಿಕ್ ಶಾಲೆಯ ಮಕ್ಕಳ ಉತ್ತಮ ಪ್ರದರ್ಶನ
ಬೀದರ:ಮಾ.12: ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ವತಿಯಿಂದ ಚಿತ್ರಕಲಾ ಸ್ಪರ್ಧೆ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿವಿಧ ಶಾಳೆಗಳ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಗುರು ನಾನಕ ಪಬ್ಲಿಕ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶ್ರೀಮಯ್ ಶ್ರೀಕಾಂತ ದೇಶಪಾಂಡೆ ಮೊದಲನೆ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನ 8ನೇ ತರಗತೀಯ ಸಂಸ್ಕøತಿ ಸಂಜೀವಕುಮಾರ ಮತ್ತು ಮೂರನೇ ಸ್ಥಾನ 6ನೇ ತರಗತೀಯ ದೇವಿಕಾ ಸಂತೋಷ ಇವರುಗಳು ಬಹುಮಾನ ಮತ್ತು ಪ್ರಮಾಣ ಪತ್ರ ಪಡೆದುಕೊಂಡು ಕೀರ್ತಿ ತಂದಿದ್ದಾರೆ. ಈ ಸಾಧನೆಗಾಗಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ಅವರಿಂದ ಸನ್ಮಾನಿಸಲಾಯಿತು. ಮೂರಕ್ಕೆ ಮೂರು ವಿದ್ಯಾರ್ಥಿಗಳು ಇದೆ ಶಾಲೆಯ ಇರುವುದು ಗಮನಾರ್ಹ.
ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ಅಂಗವಾಗಿ ಹಾಗೂ ಡ್ರಗ್ಸ್ ಮತ್ತು ಮಾದಕ ದೃವ್ಯಗಳ ದುಷ್ಪರಿಣಾಮ ಕುರಿತು ಜಾಗೃತಿ 5 ಕಿ.ಮೀ. ಮ್ಯಾರಾಥನ ಓಟ ಏರ್ಪಡಿಸಲಾಗಿತ್ತು. ಇದರಲ್ಲಿ ಗುರು ನಾನಕ ಪದವಿ ಕಾಲೇಜ್ ಬೀದರಿನ ಬಿ.ಎಸ್ಸಿ. ಕಂಪ್ಯೂಟರ್ ಸೈನ್ಸ್‍ನ ಕುಮಾರಿ ಐಶ್ವರ್ಯ ಪ್ರಥಮ ಸ್ಥಾನ, ಅಭಿಷೇಕ್ ದ್ವಿತೀಯ ಸ್ಥಾನ ಪಡೆದರೆ ಗುರು ನಾನಕ ಪಬ್ಲಿಕ್ ಶಾಲೆ 8ನೇ ತರಗತಿಯ ವಿದ್ಯಾರ್ಥಿ ಡಿ.ವಿನಯ್ ಕುಮಾರ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ಮಾತನಾಡಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಮ್ಮ ಪ್ರತಿಭೆವೃದ್ಧಿಯಾಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ವಿವಿಧ ಸ್ಪರ್ಧೇಗಳಲ್ಲಿ ಭಾಗವಹಿಸಬೇಕು ಎಂದು ಕರೆಕೊಟ್ಟರು.