ಹೆಣ್ಣನ್ನು ಕಾಣುವ ರೀತಿ ಬದಲಾಗಬೇಕು:ರಾಧಿಕಾ ಬಹನಜೀ
ಭಾಲ್ಕಿ:ಮಾ.12:ಮಹಿಳೆಗೆ ಸಮಾಜದಲ್ಲಿ ಕಾಣುವ ರೀತಿ ಬದಲಾದರೇ ಮಾತ್ರ ಆಕೆ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ರಾಧಿಕಾ ಬಹನಜೀ ಪ್ರತಿಪಾದಿಸಿದರು.
ಇಲ್ಲಿನ ಗುರುಕೃಪಾ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೊರ್ಟ್ ವತಿಯಿಂದ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣಿಗೆ ಎಲ್ಲ ವಲಯದಲ್ಲಿ ಮನ್ನಣೆ ದೊರೆತರೆ ಕುಟುಂಬ ಪ್ರಗತಿಯತ್ತ ಸಾಗುತ್ತದೆ.ಮಹಿಳೆ ಚಾರಿತ್ರ್ಯ ಕಾಪಾಡಿಕೊಂಡು ಸಮಾಜದಿಂದ ಗೌರವ ಸಿಗುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಸ್ತ್ರೀ ರೋಗತಜ್ಞೆ ಡಾ.ಶೈಲಜಾ ತಳವಾಡೆ ಮಾತನಾಡಿ,ಕ್ಯಾನ್ಸರ್‍ನಲ್ಲಿ ವಿವಿಧ ಪ್ರಕಾರಗಳಿವೆ.ಇತ್ತೀಚೆಗೆ ಸ್ತನ ಕ್ಯಾನ್ಸರ್‍ನಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸಾವನಪ್ಪುತ್ತಿರುವುದು ಖೇದದ ಸಂಗತಿಯಾಗಿದೆ.ಕ್ಯಾನ್ಸರ್ ಕಾಯಿಲೆಗೆ ನಿರ್ಲಕ್ಷ್ಯ ಮಾಡದೇ ಮುನ್ನೇಚರಿಕೆ ಕ್ರಮಗಳ ಮೂಲಕ ಜೀವ ಉಳಿಸಿಕೊಳ್ಳಬಹುದು ಎಂದು ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ರೇಖಾ ರಾಜಶೇಖರ ಅಷ್ಟೂರೆ ಮಾತನಾಡಿ,ಹೆಣ್ಣು ತಾಯಿಯಾಗಿ,ಮಡದಿಯಾಗಿ,ಸಹೋದರಿಯಾಗಿ,ಸೊಸೆಯಾಗಿ ಬಹುರೂಪಿ ಪಾತ್ರನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾಳೆ.ಪುರುಷರು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಬೇಕು ಎಂದು ತಿಳಿಸಿದರು.ನಗರ ಪೋಲಿಸ್ ಠಾಣೆಯ ಪಿಎಸ್‍ಐ ಯಶೋಧಾ ಕಟಕೆ ಕರಾಟೆ ಮಾತನಾಡಿ,ಸ್ತ್ರೀಯರು ದೌರ್ಜನ್ಯ,ವರದಕ್ಷಿಣೆ ಕಿರುಕುಳ,ಲೈಂಗಿಕ ಕಿರುಕುಳದಿಂದ ಧೈರ್ಯ ಕಳೆದುಕೊಳ್ಳದೆ ಆತ್ಮವಿಶ್ವಾಸದಿಂದ ಎದುರಿಸಬೇಕು.ಮಹಿಳೆಯರಿಗೆ ರಕ್ಷಣೆ ನೀಡಿ ಕಚೇರಿಗಳಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.ನ್ಯಾಯವಾದಿ ಸಂಘದ ನಿಕಟಪೂರ್ವ ಅಧ್ಯಕ್ಷ ಆರತಿ ಸುಬೋದ ತಿವಾರಿ ಮಾತನಾಡಿ,ಮಹಿಳೆಯರು ಶೋಷಣೆಗೊಳಗಾದಲ್ಲಿ ನ್ಯಾಯಲಯದ ಸಹಕಾರ ಪಡೆಯಬೇಕು ಎಂದು ತಿಳಿಸಿದರು.
ಭವ್ಯ ಸತ್ಕಾರ:ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರೇಖಾ ರಾಜಶೇಖರ ಅಷ್ಟೂರೆ (ಸಾಮಾಜಿಕ),ಯಶೋಧಾ ಕಟಕೆ,(ಪೋಲಿಸ್ ಇಲಾಖೆ)ಡಾ.ಸುಜಯ ಡೋಣಗಾಪುರೆ (ವೈದ್ಯಕೀಯ),ಆರತಿ ಸುಬೋದ ತಿವಾರಿ(ಕಾನೂನು)ಸುಭಾಂಗಿ ಚನ್ನಬಸವಣ್ಣ ಬಳತೆ (ಧಾರ್ಮಿಕ),ದಿಶಾ ನೆಲವಾಡೆ(ಕ್ರೀಡೆ),ಆದಿತಿ ವೀರಶೆಟ್ಟಿ ಬಕ್ಕಾ(ಕ್ರಿಕೇಟ್) ಅವರನ್ನು ರೋಟರಿ ಕ್ಲಬ್ ವತಿಯಿಂದ ಭವ್ಯವಾಗಿ ಸತ್ಕರಿಸಲಾಯಿತು.ರೋಟರಿ ಕ್ಲಬ್ ತಾಲೂಕು ಅಧ್ಯಕ್ಷ ಡಾ.ವಿಲಾಸ ಕನಸೆ,ಕಾಂiÀರ್iದರ್ಶಿ ನ್ಯಾಯವಾದಿ ಸಾಗರ ನಾಯಕ್,ಪ್ರಮುಖರಾದ ಡಾ.ಅಮೀತ ಅಷ್ಟೂರೆ,ಉಮಾಕಾಂತ ವಾರದ,ಡಾ.ಯುವರಾಜ ಜಾಧವ,ಡಾ.ಧನರಾಜ ಹುಲಸೂರೆ,ಸಂಜೀವಕುಮಾರ ಪಂಡರಗೆರೆ,ಡಾ.ವಿಜಯಕುಮಾರ ರಾಠೋಡ,ಪ್ರೊ.ಅಮರ ಗಿರಿ,ಅಶ್ವೀನ ಭೋಸ್ಲೆ,ದತ್ತಾತ್ರಿ ಮೆಹಕ್ರೆ,ಡಾ.ಗುಂಡೇರಾವ ಶೆಡೋಳೆ,ಡಾ.ಪ್ರಭು ಕೋಟೆ,ಡಾ.ರಾಹುಲ ರಾಜುರೆ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
“ಮಹಿಳೆ ಇಂದು ಸಾಮಾಜಿಕ,ಧಾರ್ಮಿಕ,ಸಾಂಸ್ಕøತಿಕ,ಶೈಕ್ಷಣಿಕ ಹಾಗೂ ವೈಜ್ಞಾನಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆ ನೀಡಿ,ದೇಶ ಅಭಿವೃದ್ಧಿಯತ್ತ ಕೊಂಡೊಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ.ಬಾಲಕಿಯರು ಶೈಕ್ಷಣಿಕ ವಲಯದಲ್ಲಿ ಮುಂದುವರೆದು ಸ್ವಾವಲಂಬಿ ಜೀವನ ಸಾಧಿಸಲು ಪಣತೊಡಬೇಕು.ರೋಟರಿ ಕ್ಲಬ್‍ನವರ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಹಿಳೆಯರಿಗೆ ಪ್ರೇರಣೆ,ಪ್ರೋತ್ಸಾಹ ನೀಡುತ್ತದೆ.”-ರಾಧಿಕಾ ಬಹನಜೀ ಭಾಲ್ಕಿ.