ವಿಶ್ವಕರ್ಮ ಜಯಂತಿ
ನವಲಗುಂದ,ಸೆ.17: ವಿಶ್ವಕರ್ಮ ಸಮಾಜ ಬಾಂದವರು ಸರಕಾರದ ಸೌಲಭ್ಯಗಳನ್ನು ಪಡೆಯಿರಿ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ತಹಶೀಲ್ದಾರರ ಕಾರ್ಯಾಲಯದಲ್ಲಿ ನಡೆದ ತಾಲೂಕಿನ ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಉದ್ದೇಶಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕಾ ಸಮಾಜ ಅಧ್ಯಕû ಗಂಗಾಧರ ಕಮ್ಮಾರ ವಹಿಸಿದ್ದರು.
ತಾ ಪಂ ಇ ಓ ಭಾಗ್ಯಶ್ರೀ ಜಹಗೀರದಾರ, ಸಿ ಪಿ ಐ ರವಿಕುಮಾರ ಕಪ್ಪತ್ತನವರ, ಮುಖ್ಯಾಧಿಕಾರ ಎಸ್ ಪಿ ಪೂಜಾರ, ಅಧಿಕಾರಿಗಳಾದ ಡಾ. ಮನೋಹರ ದ್ಯಾಬೇರಿ,ಕೃಷ್ಣ ಅರೇರ ಸಂಜೀವಕುಮಾರ ಗುಡಿಮನಿ, ಮಾರುತಿ ಗೋಕಾಕ್, ವಿಶ್ವಕರ್ಮ ಸಮಾಜದ ನಗರ ಅಧ್ಯಕ್ಷ ಎಮ್ ಎಸ್ ಮಾನಣ್ಣವರ , ಪಂಚಪ್ಪ ಬಡಿಗೇರ, ಆನಂದ ಹವಳಕೋಡ, ಬಸವರಾಜ ಬಡಿಗೇರ, ಗುಂಡಪ್ಪ ಪತ್ತಾರ, ಪ್ರಕಾಶ ಬಡಿಗೇರ, ಮಾನಪ್ಪ ಮನವಾಚಾರ್ಯ, ರಾಮಣ್ಣ ಬಡಿಗೇರ ಕಾಳಪ್ಪಬಡಿಗೇರ, ಅಂದಪ್ಪ ಬಡಿಗೇರ, ಸೇರಿದಂತೆ ಪುರಸಭೆ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಶ್ರೀಕಾಂತ ಮನುವಾಚಾರ್ಯ ಸ್ವಾಗತಿಸಿದರು, ರವಿ ವಿಶ್ವಜ್ಞ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಬೆಂಚಿಗೇರಿ ನಿರೂಪಿಸಿದರು.