ತಾಲೂಕಾ ಮಟ್ಟದ ಕ್ರೀಡಾಕೂಟ
ನವಲಗುಂದ,ಸೆ.17: ಯುವಕರಲ್ಲಿ ಕ್ರೀಡಾಭಿಮಾನವನ್ನು ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು, ದೈಹಿಕ, ಮಾನಸಿಕ ನೆಮ್ಮದಿಗೆ ಕ್ರೀಡೆ ಹಾಗೂ ಯೋಗದ ಅವಶ್ಯಕತೆ ಇದೆ ಎಂದು ಶಾಸಕ ಎನ್ ಎಚ್ ಕೊನರಡ್ಡಿ ತಿಳಿಸಿದರು.
ಹೆಬ್ಬಾಳ ಗ್ರಾಮದ ಶ್ರೀಮತಿ ಗಂಗಮ್ಮ ಹನುಮರಡ್ಡಿ ದೇವರಡ್ಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡದ್ದ ತಾಲೂಕ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ಶಾಂತಿಗಾಗಿ ಕ್ರೀಡೆ ಬೇಕು. ಕೇವಲ ಬಹುಮಾನ ಗೆಲ್ಲಲು ಅಲ್ಲ ಎಂದರು.
ಪ್ರಾಚಾರ್ಯರಾದ ಸಿ. ಎನ್. ಪೂಜಾರ್ ಅಧ್ಯಕ್ಷತೆ ವಹಿಸಿದ್ದರು. ಹನುಮರೆಡ್ಡಿ ದೇವರಡ್ಡಿ ನಿರೂಪಿಸಿದರು. ಕೆ ಕೆ ಕಪ್ಪಲಿ ಮತ್ತು ಲಕ್ಷ್ಮಿ ಪ್ರಶಸ್ತಿ ವಿತರಣಾ ನಡೆಸಿಕೊಟ್ಟರು.
ನಾರಾಯಣ ದೇವರಡ್ಡಿ, ಸುಭಾಸಗೌಡ ಯರಗಟ್ಟಿ, ವೀರಭದ್ರಪ್ಪ ಬಡಕಲಿ, ಪಾರ್ವತವ್ವ ಜೆಟ್ಟೆಣ್ಣವರ, ಸಿದ್ದಪ್ಪ ಉದುಪುಡಿ, ಪಾಂಡಪ್ಪ ಮದ್ನೂರ, ಕುಮಾರ ಮಾದರ ಸೇರಿದಂತೆ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.