ವಿಶ್ವಕರ್ಮ ಹಾಸ್ಟಲ್ ಗೆ ಹೆಚ್ಚಿನ ಅನುದಾನ ನೀಡಲು ಸಂಸದರಿಗೆ ಮನವಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.17: ವಿಶ್ವಬ್ರಾಹ್ಮಣ,  ವಿಶ್ವಕರ್ಮ ಎಜುಕೇಷನ್ ಟ್ರಸ್ಟ್ ನಿಂದ ನಿರ್ಮಾಣ ಮಾಡುತ್ತಿರುವ  ವಿದ್ಯಾರ್ಥಿ ವಸತಿ ನಿಲಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಸಂಸದ ಈ.ತುಕರಾಂ ಅವರಿಗೆ ಜಿಲ್ಲಾ ವಿಶ್ವ ಕರ್ಮ ವಿಕಾಸ ವೇದಿಕೆಯಿಂದ ಮನವಿ‌ಮಾಡಲಾಯ್ತು.
ನಗರದಲ್ಲಿಂದು ನಡೆದ ವಿಶ್ವ ಕರ್ಮ‌ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದರಿಗೆ ವಿಕಾಸ ವೇದಿಕೆಯ ಅಧ್ಯಕ್ಷ  ಚಂದ್ರಕಾಂತ ಎಸ್. ಸೋನಾರ್  ಮನವಿ ಸಲ್ಲಿಸಿ.
ವಿಶ್ವಬ್ರಾಹ್ಮಣ, ವಿಶ್ವಕರ್ಮ ಸಮುದಾಯವು ಹೆಚ್ಚಾಗಿ ಪಂಚ ಕಸುಬುಗಳನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದು, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿರುತ್ತೇವೆ. ಕಾರಣ ಸಮುದಾಯದ ಅಭಿವೃದ್ಧಿ ಹಿತ ದೃಷ್ಟಿಯಿಂದ. ವಿದ್ಯಾರ್ಥಿ ವಸತಿ ನಿಲಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು.
ಸಾಮಾಜದ ಶ್ರೀ ಓಂಕಾರ ಸ್ವಾಮಿ ಮಠ ಆಂದ್ರಾಳ್‌ ರಸ್ತೆ, ಬಳ್ಳಾರಿ ಇಲ್ಲಿ ಅಕ್ರಮವಾಗಿ ನಿರ್ಮಿಸಿರುವ ಗುಡಿಸಲು ತೆರವುಗೊಳಿಸಿ ಸದರಿ ಮಠದ ಅಭಿವೃದ್ಧಿಗೆ ಅನುದಾನ ನೀಡಬೇಕು. ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಮಾಡಬೇಕು
.ಆರ್ಥಿಕವಾಗಿ ಹಿಂದುಳಿದ ವಿಶ್ವಕರ್ಮ ಜನಾಂಗದವರಿಗೆ ಆಶ್ರಯ ಯೋಜನೆಯಡಿ ವಸತಿ ಸೌಲಭ್ಯ ಒದಗಿಸುವುದು. ವಿಶ್ವಕರ್ಮ ಅಭಿವೃದ್ಧಿ ನಿಗಮನಕ್ಕೆ ಹೆಚ್ಚಿನ ಅನುದಾನ ನೀಡಿ ಪಂಚ ಕಸುಬುಗಳಾದ ಬಡಗಿ, ಕಮ್ಮಾರ ಶಿಲ್ಪಿ, ಲೋಹ, ಚಿನ್ನ-ಬೆಳ್ಳಿ ಕೆಲಸಗಾರರನ್ನು ಹಾಗೂ ಬಡ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡಬೇಕೆಂದು ಮನವಿ ಮಾಡಿದರು.