ಉತ್ತರ ಕರ್ನಾಟಕದಲ್ಲಿ ನಾನೇ ಹೆಚ್ಚು ಸಿನಿಮಾ ಮಾಡಿರೋದು
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ12: ಅಪ್ಪಾಜಿ ಅವರ ನಂತರ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ಮಾಡಿರುವುದು ನಾನೇ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದರು.
ಕರಟಕ ದಮನಕ ಚಿತ್ರದ ಗೆಲುವಿನ ಹಿನ್ನೆಲೆಯಲ್ಲಿ ವಿಜಯ್ ಯಾತ್ರೆ ಆರಂಭಿಸಿ ಸೋಮವಾರ ಸಂಜೆ ನಗರಕ್ಕೆ ಆಗಮಿಸಿದ ಅವರು, ಡಾ‌.ಪುನೀತ್ ರಾಜಕುಮಾರ್ ಪುತ್ತಳಿಗೆ ಹೂವಿನ ಹಾರ ಹಾಕಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕರಟಕ ದಮನಕ ಒಳ್ಳೆ ಸಿನಿಮಾ ಬಯಲು ಸೀಮೆಯ ಚಿತ್ರವಾಗಿದೆ. ಊರು, ನೀರು, ತೇರು ಈ ವಿಷಯವನ್ನ  ಇಟ್ಟುಕೊಂಡೇ ಯೋಗರಾಜ್ ಭಟ್ರ ಭಟ್ರು ಹಾರ್ಟ್‌ ಟಚಿಂಗ್ ಸಿನಿಮಾ ಮಾಡಿದ್ದಾರೆ. ಇದನ್ನ ನೋಡಿದ್ಮೇಲೆ ಊರು ಬಿಟ್ಟವರು ವಾಪಸ್ ಊರಿಗೆ ಬರಬಹುದು. ಬರಗಾಲ ಬಿದ್ದ ಊರನ್ನ ಬಿಟ್ಟು ಬೆಂಗಳೂರು ಜನರ ವ್ಯಥ್ಯೆ ಕೂಡ ಇದೆ. ಇದರೊಟ್ಟಿಗೆ ಭಟ್ರು ಅವಧೂತನಂತೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿವೆ. ಜನರು ಚಿತ್ರವನ್ನ ಒಪ್ಪಿಕೊಳ್ತಿದ್ದಾರೆ. ಪ್ರಭುದೇವ ಮಾತು ಮತ್ತು ನನ್ನ ಅಭಿನಯವನ್ನ ಮೆಚ್ಚಿಕೊಳ್ಳುತ್ತಿದ್ದಾರೆ ಎಂದರು.
ಉತ್ತರ ಕರ್ನಾಟಕದಲ್ಲಿ ಅಪ್ಪಾಜಿಯವರು ಅತಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಅಪ್ಪಾಜಿ ನಂತರ  ನಾನೇ ಹೆಚ್ಚು ಸಿನಿಮಾಗಳನ್ನು ಮಾಡಿದ್ದೇನೆ. ಅಭಿಮಾನಿಗಳು ಅವರ ಆಸೆಯಂತೆ ಅವರ ಇಷ್ಟದಂತೆ ಸಿನಿಮಾಗಳನ್ನು ನೀಡುವುದು ನಮ್ಮ ಜವಾಬ್ದಾರಿ. ಹೊಸಪೇಟೆ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಹಲವು ಸಿನಿಮಾಗಳನ್ನು ಆಡಿಯೋ ಚಿತ್ರೀಕರಣ ಸೇರಿದಂತೆ ಹಲವು ಬಾರಿ ಬಂದು ಹೋಗಿದ್ದೇನೆ. ನಮ್ಮ ಕುಟುಂಬಕ್ಕೆ ಅತಿಯಾದ ಪ್ರೀತಿ ತೋರುವುದಿಲ್ಲ ನಾನು ಆಭಾರಿಯಾಗಿದ್ದೇನೆ.
ಕಳೆದ ಬಾರಿ ಜೆಡಿಎಸ್ ನಲ್ಲಿ ಹಿನ್ನಡೆಯಾಗಿದೆ. ಈ ಬಾರಿ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿದ್ದು ಗೆಲ್ಲುವ ವಿಶ್ವಾಸ ಇದೆ. ನಾನು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅಭಿಮಾನಿಗಳಿಗೆ ಯಾವುದೇ ರೀತಿಯಲ್ಲಿ ನಿರಾಶೆಯಾಗುವುದಿಲ್ಲ. ಅವರವರ ಸ್ವಾತಂತ್ರ್ಯ ಅವರವರಿಗೆ ಬಿಟ್ಟಿದ್ದು. ಸಿನಿಮಾ ಬೇರೆ ರಾಜಕೀಯ ಬೇರೆ. ಸಿನಿಮಾದಲ್ಲಿ ರಾಜಕೀಯ ತರುವುದಿಲ್ಲ ಎಂದರು.
ನಿರ್ಮಾಪಕ, ನಿರ್ದೇಶಕ ಶಿವರಾಜ್ ಭಟ್, ನಿರ್ಮಾಪಕ ಗುಜ್ಜಲ್ ಪುರುಷೋತ್ತಮ ಇದ್ದರು.