ಶಾಸಕರಿಂದ 105 ಕೋಟಿ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಮತ್ತು ಉದ್ಘಾಟನೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಮಾ.12  ಪಟ್ಟಣದ ಪಾದಗಟ್ಟೆ ಆಂಜನೇಯ ದೇವಸ್ಥಾನದಿಂದ ಪುರಸಭೆಯವರೆಗೆ 5.17 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ  ಹಳೆ ಊರು ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿ, ಜಾಲಿನಗರದ (ಮಂಡಕ್ಕಿ ಬಟ್ಟಿ) ಅಂಗನವಾಡಿ ಕೇಂದ್ರ ,ವರದಾಪುರ ಗ್ರಾಮದ ಅಂಗನವಾಡಿ ಕೇಂದ್ರ ಹಾಗೂ ತಾಲೂಕಿನ ಮರಬ್ಬಿ ಹಾಳು ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾದ ಘನತ್ಯಾಜ್ಯ ವಿಲೇವಾರಿ ಘಟಕವನ್ನು.ಶಾಸಕ ಕೆ  ನೇಮಿರಾಜ ನಾಯ್ಕ್  ಉದ್ಘಾಟಿಸಿದರು .
ಕೆ.ಎಂ. ಇ .ಆರ್.ಸಿ., ಜಲಜೀವನ್ ಯೋಜನೆ , ಕೆ.ಕೆ.ಆರ್. ಡಿ.ಬಿ.ಮತ್ತು ಡಿ.ಎಂ.ಎಪ್ ಯೋಜನೆ ಅಡಿ ರಸ್ತೆ,,ಕುಡಿಯುವ ನೀರು, ಚರಂಡಿ,ಕಟ್ಟಡಗಳ ಇನ್ನಿತರ ಒಟ್ಟು 105 ಕೋಟಿ     ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರ   ಭೂಮಿಪೂಜೆ ನೆರವೇರಿಸಿದರು ನಂತರ ಮಾತನಾಡಿ ಪಟ್ಟಣದ ರಾಮನಗರ,ಅರಳಹಳ್ಳಿ, ಕುರುದ ಗಡ್ಡಿ ಪ್ರದೇಶ ಹಿಂದುಳಿದ ಪ್ರದೇಶವಾಗಿದ್ದು ಈ ಭಾಗದಲ್ಲಿ ರಸ್ತೆ ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಮತ್ತು ಈ ಭಾಗದ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡುವುದಾಗಿ ಜನಸಂಖ್ಯೆಗೆ ಅನುಗುಣವಾಗಿ 10 ಲಕ್ಷ,15 ಲಕ್ಷ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕ್ ನಿರ್ಮಿಸಿ ಜನತೆಗೆ ದಿನನಿತ್ಯ ಕುಡಿಯುವ ನೀರು ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು.ಪ್ರಸ್ತುತ ದಿನಗಳಲ್ಲಿ ನೀರಿನ ಸಮಸ್ಯೆ ಇದ್ದು ಸಿಂಗಟಾಲೂರುರಿಂದ ಒಮ್ಮೆ ನೀರು ಬಿಟ್ಟರೆ ಹೀಗಿರುವ ನೀರಿನ ಸಮಸ್ಯೆ ನಿವಾರಣೆಗೆ ಅನುಕೂಲವಾಗುತ್ತದೆ.ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕ್ರಮ ವಹಿಸಲಾಗುವುದು. ಮುಂಬರುವ ದಿನಗಳಲ್ಲಿ  24 ಕೋಟಿ ಅನುದಾನದ ಕಾಮಗಾರಿಯಿಂದ ಹಗರಿಬೊಮ್ಮನಹಳ್ಳಿ ಜನತೆಗೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂದರು.
 ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ದೊಡ್ಡ ಬಸಪ್ಪ ,ಲೋಕೋಪಯೋಗಿ ಇಲಾಖೆ ಅಧಿಕಾರಿ ಪುರುಷೋತ್ತಮ,ನರೇಗಾ ಸಹಾಯಕ ನಿರ್ದೇಶಕ ರಮೇಶ ಮಹಾಲಿಂಗಪುರ ,ಜಿಲ್ಲಾಪಂಚಾಯತ್ ಅಧಿಕಾರಿ ಸದಾಶಿವ ನಾಯ್ಕ್, ಪುರಸಭೆ ಸದಸ್ಯರಾದ ನೆಲ್ಲು ಇಸ್ಮಾಯಿಲ್ ಸಾಬ್, ನಾಗರಾಜ ಜನ್ನು,ದೀಪಕ್ ಕಠಾರೆ,ಜೆಡಿಎಸ್ ಅದ್ಯಕ್ಷ ವೈ.ಮಲ್ಲಿಕಾರ್ಜುನ ,ಡಾ.ವಿನಯ,ಮುಖಂಡರಾದ ಕೃಷ್ಣಮೂರ್ತಿ ಶೆಟ್ರು,ರಾಜು ಪಾಟೀಲ್, ಬಾದಾಮಿ ಮೃತ್ಯುಂಜಯ,ಸರ್ದಾರ್ ಯಮನೂರಪ್ಪ,      ,ಪಾಂಡು ರಂಗ ನಾಯ್ಕ್ ,  ಜಿ.ಎಂ ಜಗದೀಶ್, ರಶೀದ್,ನಿಯಾಜ್, ಬ್ಯಾಟಿ ನಾಗರಾಜ್, ಚಿತ್ವಾಡಗಿ ಪ್ರಕಾಶ್, ಪವಾಡಿ ಸಣ್ಣ ಹನುಮಂತಪ್ಪ,ಸೇರಿದಂತೆ ಇತರರು ಇದ್ದರು.
One attachment • Scanned by Gmail