ರೈಲ್ವೆ ಸ್ಟೇಷನ್ ನಲ್ಲಿ ಗೂಡ್ಸ್ ಶೆಡ್ ಸೆಂಟರ್  ಉದ್ಘಾಟನೆ
ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.12: ನಗರದ ರೈಲ್ವೆ ಸ್ಟೇಷನ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಾದ್ಯಂತ ಒಟ್ಟು 85000 ಕೋಟಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳ ವರ್ಚುವಲ್ ಉದ್ಘಾಟನಾ ಹಿನ್ನಲೆ ಗಂಗಾವತಿ ನಗರದ ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್ ಶೆಡ್ ಸೆಂಟರ್ ನ ಉದ್ಘಾಟನೆಯನ್ನು ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ನೇತೃತ್ವದಲ್ಲಿ ವಾರ್ಡಿನ ನಗರಸಭೆ ಸದಸ್ಯರಾದ ಉಮೇಶ ಸಿಂಗನಾಳ ನೆರವೇರಿಸಿದರು.
ನಂತರ ಉಮೇಶ ಸಿಂಗನಾಳ ಮಾತನಾಡಿ  ಗಂಗಾವತಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ಸಂಸದರಾದ ಕರಡಿ ಸಂಗಣ್ಣನವರು ಗಂಗಾವತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಜನಪರ ಯೋಜನೆ ಜಾರಿ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ ಎಂದರು. ಈ ವೇಳೆ  ನಗರಸಭೆ ಸದಸ್ಯರಾದ ನವೀನ್ ಮಾಲಿಪಾಟೀಲ, ನೀಲಕಂಠ ಕಟ್ಟಮನಿ, ಮಂಡಲ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಅರಿಕೇರಿ, ವಾಣಿಜ್ಯೋದ್ಯಮಿಗಳಾದ ಸುರೇಶ ಸಿಂಗನಾಳ, ವಿರೂಪಾಕ್ಷಿ ಎಚ್ ಎಮ್, ಮಲ್ಲಿಕಾರ್ಜುನ ಗಡಾದ, ಸಂಗಯ್ಯ ಸ್ವಾಮಿ, ಶ್ರೀನಿವಾಸ ಧೂಳ ಉಪಸ್ಥಿತರಿದ್ದರು.