ನಾರಿ ಶಕ್ತಿ – ಫಿಟ್‌ನೆಸ್ ರನ್ಸ್”
ಸಂಜೆವಾಣಿ ವಾರ್ತೆ
ಬಳ್ಳಾರಿ: 12 ಮಾರ್ಚ್: ಅಂತರರಾಷ್ಟ್ರೀಯ ಮಹಿಳಾ ದಿನಚರಣೆಯ ಅಂಗವಾಗಿ ನೆಹರು ಯುವ ಕೇಂದ್ರವು ಮಹಿಳೆಯರ ಸಬಲೀಕರಣವನ್ನು ಆಚರಿಸಲು ಮತ್ತು ಎಲ್ಲಾ ವಯಸ್ಸಿನ ಮಹಿಳೆಯರಲ್ಲಿ ಫಿಟ್‌ನೆಸ್ ಅನ್ನು ಉತ್ತೇಜಿಸಲು “ನಾರಿ ಶಕ್ತಿ – ಫಿಟ್‌ನೆಸ್ ರನ್ಸ್” ಎನ್ನುವ ಕಾರ್ಯಕ್ರಮವನ್ನು ಇಂದು (11/03/2024) ಬೆಳಿಗ್ಗೆ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಹಮ್ಮಿಕೊಳ್ಳಾಲಾಗಿತ್ತು. ಸುಮಾರು 35 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದು, ಪ್ರಥಮ ಸ್ಥಾನ-ಸ್ವಾತಿ (5ನೇ ಸೆಮಿಸ್ಟರ್-ಸಿಎಸ್‌ಇ), ದ್ವಿತೀಯ ಸ್ಥಾನ-ಎಂ ಪ್ರಗತಿ (1ನೇ ಸೆಮಿಸ್ಟರ್-ಎಂಬಿಎ) ಮತ್ತು ಮೂರನೇ ಸ್ಥಾನ- ಸವಿತ (2ನೇ ಸೆಮಿಸ್ಟರ್-ಎಐಎಂಎಲ್) ಪಡೆದರು.
“ಓಟ, ಯೋಗ, ಏರೋಬಿಕ್ಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಫಿಟ್‌ನೆಸ್ ಚಟುವಟಿಕೆಗಳ ಶ್ರೇಣಿಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಮಹಿಳೆಯರಲ್ಲಿ ಸಮುದಾಯ ಮತ್ತು ಸೌಹಾರ್ದತೆಯ ಪ್ರಜ್ಞೆಯನ್ನು ಬೆಳೆಸುವ ಗುರಿಯನ್ನು ಹೊಂದಿದ್ದು, ಅವರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಈ ಕಾರ್ಯಕ್ರಮವು ಪ್ರೋತ್ಸಾಹಿಸುತ್ತದೆ” ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್  ರವರು ಬಹುಮಾನಗಳನ್ನು ವಿತರಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ತಿಳಿಸಿದರು.
ಕಾಲೇಜಿನ ಎಲ್ಲಾ ಮಹಿಳಾ ಶಿಕ್ಷಕ-ಶಿಕ್ಷಕೇತರ ವೃಂದದವರು  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಇದೇ ಸಂದರ್ಭದಲ್ಲಿ ಪಿ.ಹೆಚ್.ಡಿ. ಪದವಿ ಪಡೆದವರಾದ ಡಾ.ಹೇಮವತಿ, ಡಾ.ಶೀತಲ್ ಜಂತಕಲ್ ಅವರನ್ನು ಸನ್ಮಾನಿಸಲಾಯಿತು.
ಬಿಐಟಿಎಂ ವುಮನ್ ವಿಂಗ್ ಅಧ್ಯಕ್ಷರಾದ ಡಾ. ರಾಜಶ್ರೀ ಬಿರಾದಾರ, ಡಾ.ಆರಾಧನ ಡಿ, ಮಹೇಶ್ವರಿ ವಿ.ಜೆ. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಟಾರ್, ಅಮರೇಶ್, ಶಿಕ್ಷಕ ವೃಂದದವರಾದ ಅಮೃತ, ಚೈತ್ರ, ದೈಹಿಕ ಶಿಕ್ಷಕರಾದ ಅಶೋಕ್ ಉಪಸ್ಥಿತರಿದ್ದರು.