ಲಕ್ಷ್ಮೇಶ್ವರ ಪುರಸಭೆ ಬಜೆಟ್
ಲಕ್ಷ್ಮೇಶ್ವರ,ಮಾ12: ಪಟ್ಟಣದ ಪುರಸಭೆಯ 2024-25ನೇ ಸಾಲಿನಲ್ಲಿ 24ಕೋಟಿ 44 ಲಕ್ಷ ಗಾತ್ರದ ಬಜೆಟನ್ನು ಮುಖ್ಯಾಧಿಕಾರಿ ಮಹೇಶ ಹಡಪದ ಮಂಡಿಸಿದರು. ಪುರಸಭೆಯ ಸಭಾಭವನದಲ್ಲಿ ಸೋಮವಾರ ನಡೆದ ಬಜೆಟ್ ಮಂಡನೆ ಸಭೆಯ ನಂತರ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆಯ ನಿಧಿಯಿಂದ 80 ಲಕ್ಷ ಅನುದಾನ. 72 ಲಕ್ಷ ಅನುದಾನ ಸೇರಿ ಒಟ್ಟು 1.52 ಕೋಟಿ ಹಣ ಮೀಸಲಿಡಲಾಗಿದೆ. ಎಸ್‍ಎಫ್ ಸಿ
ಮುಕ್ತಿ ನಿಧಿ. 15 ನೇ ಹಣಕಾಸು ಮತ್ತು ಇತರೆ ಅನುದಾನದ ಮೂಲದಿಂದ 9 ಕೋಟಿ 71 ಲಕ್ಷ ಮೀಸಲಿಡಲಾಗಿದೆ. ಇತರೇ ಅಸಾಮಾನ್ಯ ಖಾತೆಯಿಂದ 1.28 ಕೋಟಿ ಹೀಗೆ ಒಟ್ಟು 14 ಕೋಟಿ 70 ಲಕ್ಷ ಮತ್ತು ಆರಂಭಿಕ ಶಿಲ್ಕು 9. 73 ಲಕ್ಷ ಸೇರಿ ಬಜೆಟ್ನ ಗಾತ್ರ 24.44 ಕೋಟಿ ಇರುತ್ತದೆ.
ಅದೆ ರೀತಿ ಬೀದಿ ದೀಪ. ವಿದ್ಯುತ್ ಬಿಲ್. ರಸ್ತೆ ಮತ್ತು ಚರಂಡಿ. ಪುರಸಭೆಯ ನೌಕರರ ವೇತನ. ಸರ್ಕಾರಕ್ಕೆ ಕಟ್ಟಬೇಕಾದ ಉಪ ಕರ ಮತ್ತು ತೆರಿಗೆ ಹಾಗೂ ಬಾಕಿ ಕಾಮಗಾರಿಗಳಿಗೆ ಅನುದಾನ. ಜೆಡಿಎಸ್ ಎಂಟಿ ಮಳಿಗೆ ನಿರ್ಮಾಣ ಸೇರಿದಂತೆ 23.61 ಕೋಟಿ ವಿನಿಯೋಗಿಸಿದ ನಂತರ ಒಟ್ಟು ಪುರಸಭೆಗೆ 82.32 ಲಕ್ಷ ಉಳಿತಾಯ ಅಂದಾಜಿಸಲಾಗಿದೆ ಎಂದು ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.
ಬಜೆಟ್ ಸಭೆಯಲ್ಲಿ ಪುರಸಭೆ ಸದಸ್ಯ ಜಯಕ್ಕ ಕಳ್ಳಿ. ಜಯಕ್ಕ ಅಂದಲಗಿ. ಪೂರ್ಣಿಮಾ ಪಾಟೀಲ. ಬಸವರಾಜ ಓದುವವರು. ಪ್ರವೀಣ್ ಬಾಳಿಕಾಯಿ. ರಾಮು ಗಡದವರ. ಫಿರ್ಧೋಷ ಅಡೂರು. ಸಾಹೀಬಜಾನ್ ಹವಾಲ್ದಾರ್. ಮಹಾದೇವಪ್ಪ ಅಣ್ಣಿಗೇರಿ. ಪೂಜಾ ಕರಾಟೆ. ವಾಣಿ ಹತ್ತಿ. ನೀಲಮ್ಮ ಮೆಣಸಿನಕಾಯಿ. ಮಂಜವ್ವ ಗುಂಜಾಳ.ಕವಿತಾ ಶೆರಸೂರಿ. ಮಂಜವ್ವ ನಂದೆಣ್ಣವರ ಸೇರಿದಂತೆ ಕಿರಿಯ ಎಂಜಿನಿಯರ್ ಜೆ.ಕೆಉಳ್ಳಟ್ಟಿ. ಮಹೇಶ್ ಹೊಸಮನಿ. ಕಂದಾಯ ಅಧಿಕಾರಿ ಶಿವಾನಂದ ಅಜ್ಜಣ್ಣವರ. ಹನುಮಂತಪ್ಪ ನಂದೆಣ್ಣವರ. ಶಿವಣ್ಣ ಮ್ಯಾಗೇರಿ. ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮತ್ತು ಎಸ್.ವಿ.ಬೆಳ್ಳಿಕೊಪ್ಪ ಇದ್ದರು.